ನಿರ್ದೇಶಕ ಸಂತೋಷ್ ಶೆಟ್ಟಿ ಸಾವು ಪ್ರಕರಣ: ನಾಲ್ವರ ವಿರುದ್ಧ ಕೇಸ್​

ಮಂಗಳೂರು: ಎರ್ಮಾಯ್ ಫಾಲ್ಸ್​​ನಲ್ಲಿ ಬಿದ್ದು ಸ್ಯಾಂಡಲ್​ವುಡ್​ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಕೇಸ್​ ದಾಖಲಾಗಿದೆ. ಅನುಮತಿ ಪಡೆಯದೇ ಫಾಲ್ಸ್​​ನಲ್ಲಿ ಶೂಟಿಂಗ್ ನಡೆಸಿದ್ದ ಹಿನ್ನೆಲೆಯಲ್ಲಿ ಸಂತೋಷ್​ ಕುಮಾರ್ ಶೆಟ್ಟಿ ಜೊತೆಗೆ ತೆರಳಿದ್ದ ನಾಲ್ವರ ವಿರುದ್ಧ ಕೇಸ್​ ದಾಖಲಾಗಿದೆ. ರತ್ನಾಕರ್​, ಕಾರ್ತಕ್​, ಯೋಗಿಶ್​ ಹಾಗೂ ಒಬ್ಬ ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಬೆಳ್ತಂಗಡಿ ಠಾಣೆ ಪೊಲೀಸರು 304 A ಸೆಕ್ಷನ್​ ಅಡಿಯಲ್ಲಿ ಕೇಸ್​​ ದಾಖಲಿಸಿಕೊಂಡಿದ್ದಾರೆ.

ಇಂದು ಬೆಳಗ್ಗೆ ಎರ್ಮಾಯ್​​ ಫಾಲ್ಸ್‌ನಲ್ಲಿ ಫೋಟೋ ಶೂಟ್ ನಡೆಯುತ್ತಿದ್ದ ಸಂದರ್ಭದಲ್ಲಿ ‘ಕನಸು’ ಚಿತ್ರದ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ರು. ಸಂತೋಷ್ ಕುಮಾರ್ ಶೆಟ್ಟಿ ಸೇರಿ ಒಟ್ಟು ನಾಲ್ಕು ಮಂದಿ ಫೊಟೋ ಶೂಟ್​​ಗೆ ತೆರಳಿದ್ದರು. ಫೊಟೋ ಶೂಟ್ ಮಾಡ್ತಿದ್ದ ವೇಳೆ ಜೋರಾಗಿ ಮಳೆ ಬಂದಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ ಕಾಲು ಜಾರಿ ಬಿದ್ದಿದ್ರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv