ವಿಷ್ಣುವರ್ಧನ್​​​ ಚಿತ್ರ ನೋಡಲು ಕ್ಯೂನಲ್ಲಿ ನಿಲ್ಲುತ್ತಿದ್ದರಂತೆ ದೇಸಾಯಿ

ಕನ್ನಡದ ಸೃಜನಶೀಲ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು, ಇಂದು ತಮ್ಮ ಆಪ್ತ ನಟ ವಿಷ್ಣುವರ್ಧನ್ ಅವರನ್ನು ನೆನೆಸಿಕೊಂಡು, ಅವರೊಂದಿಗೆ ಕಳೆದ ಕ್ಷಣಗಳನ್ನು ಮೆಲಕು ಹಾಕಿದ್ದಾರೆ. ಅವರ ಫೇಸ್​​ಬುಕ್ ಪೇಜಿನಲ್ಲಿ ವೀಡಿಯೋವೊಂದನ್ನು ಅಪ್​ಲೋಡ್ ಮಾಡಿರುವ ಅವರು, ವಿಷ್ಣುವರ್ಧನ್ ಅವರ ನಾಗರಹಾವು ನೋಡಲು ಕ್ಯೂನಲ್ಲಿ ನಿಂತು ಹೋಗಿದ್ದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಸಂಘರ್ಷ, ನಿಷ್ಕರ್ಷ್, ಪರ್ವ, ಕ್ಷಣ ಕ್ಷಣ ಹೀಗೆ ನಾಲ್ಕು ಚಿತ್ರಗಳಲ್ಲಿ ವಿಷ್ಣುವರ್ಧನ್ ಅವರನ್ನು ನಿರ್ದೇಶಿಸಿದ್ದು ತಮ್ಮ ಸಾರ್ಥಕ ಕ್ಷಣ ಎಂದು ಕೂಡ ಅವರು ಹೇಳಿದ್ದಾರೆ.
ಅಲ್ಲದೇ, ಇದಕ್ಕೂ ಮುನ್ನ ಮತ್ತೊಂದು ಪೋಸ್ಟ್ ಹಾಕಿದ್ದ ಅವರು ಅದರಲ್ಲಿ, ನಿಮ್ಮೊಂದಿಗೆ ಸಂಘರ್ಷ, ನಿಷ್ಕರ್ಷ, ಪರ್ವ, ಕ್ಷಣ ಕ್ಷಣ ಚಿತ್ರ ಮಾಡಿದ್ದು ನನಗೆ ಸದಾ ಹಸಿರ ನೆನಪು. ನಿಮ್ಮೊಂದಿಗೆ ಸಿನಿಮಾಗಾಗಿ ಹಾಗೂ ವೈಯಕ್ತಿಕವಾಗಿ ಕಳೆದ ಸಮಯ, ಆ ಅನುಭವ ವರ್ಣಿಸಲು ಪದಗಳು ಸಾಲಲ್ಲ. ನೀವು ದೈಹಿಕವಾಗಿ ನಮ್ಮೊಂದಿಗೆ ಇರದಿದ್ದರೂ, ನನ್ನ ಮನಸ್ಸಿನಲ್ಲಿ ನಿಮ್ಮ ಇರುವಿಕೆ ಸದಾ ಇದ್ದೇ ಇರುತ್ತೆ. Thank for being with me in my cine journey ಎಂದೂ ಸಹ ದೇಸಾಯಿ ಅವರು ಬರೆದುಕೊಂಡಿದ್ದಾರೆ.

ವಿಷ್ಣುವರ್ಧನ್ ಅವರೊಂದಿಗೆ ನಾಲ್ಕು ಸಿನಿಮಾ ಮಾಡಿದ್ದು ನನ್ನ ಸಾರ್ಥಕದ ಕ್ಷಣ:

ಕ್ಯೂನಲ್ಲಿ ನಿಂತು ನಾಗರಹಾವು ಸಿನಿಮಾ ನೋಡಿ, ವಿಷ್ಣುವರ್ಧನ್ ಬಗ್ಗೆ ಆಕರ್ಷಿತನಾಗಿದ್ದೆ. ನಂತರ ಅವರೊಂದಿಗೆ ನಾಲ್ಕು ಸಿನಿಮಾ ಮಾಡಿದ್ದು ನನ್ನ ಸಾರ್ಥಕದ ಕ್ಷಣ:

Posted by Sunil Kumar Desai on Monday, September 17, 2018

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv