ನಿರ್ದೇಶಕರಿಗೆ ಇದೆಂಥ ಸ್ಥಿತಿ, ಎಟಿ ರಘುವಿಗಾಗಿ ಮಿಡಿಯಲಿ ನಿಮ್ಮ ಹೃದಯ..

ಬೆಂಗಳೂರು: ಮಿಡಿದ ಹೃದಯಗಳು ಚಿತ್ರ ನಿರ್ದೇಶಕನಿಗೆ ಇದೆಂಥ ಪರಿಸ್ಥಿತಿ. ಮಂಡ್ಯದ ಗಂಡುವಿನಂಥ ಸೂಪರ್​ ಹಿಟ್​ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಎ.ಟಿ ರಘು ಅವರ ಇಂದಿನ ಸ್ಥಿತಿ ಎಂಥವ ಹೃದಯವನ್ನೂ ಚಿವುಟಬಲ್ಲದು. ಒಂದು ಕಾಲದಲ್ಲಿ ಕನ್ನಡ ಸಿನಿಮಾ ನಿರ್ದೇಶಕ ಇಂಡಸ್ಟ್ರಿಯಲ್ಲಿ ಅದ್ಬುತ ನಿರ್ದೇಶನದ ಮೂಲಕ ತನ್ನದೇ ಆದ ಛಾಪು ಮೂಡಿಸಿ ಎಟಿ ರಘು, ಹಿಟ್​ ಚಿತ್ರಗಳ ಮೇಲೆ ಹಿಟ್​ ಚಿತ್ರ ಕೊಟ್ಟಂಥವರು. ಅದೆಷ್ಟೋ ನಟರ ಬಾಳಲ್ಲಿ ಬೆಳಕು ಹರಿಸಿ ದಾರಿ ತೋರಿಸಿದ್ದ ರಘು ಅವರ ದಾರಿ ಈಗ ಮಸುಕಾಗಿದೆ.

ಡಾ. ರಾಜಕುಮಾರ್​ ಹಾಗೂ ನಿರ್ಮಾಪಕ ರಾಕಲೈನ್​ ವೆಂಕಟೇಶ್​ ಜೊತೆ ಎ.ಟಿ ರಘು (ಮಧ್ಯದಲ್ಲಿ ಇರುವವರು)

ಮಿಡಿದ ಹೃದಯ, ಮಂಡ್ಯದ ಗಂಡು, ಜೈಲರ್‌ ಜಗನ್ನಾಥ್‌, ಕೆಂಪುಸೂರ್ಯ, ಪುಟ್ಟ ಹೆಂಡ್ತಿ ಸೇರಿದಂತೆ 30ಕ್ಕೂ ಹೆಚ್ಚು ಚಿತ್ರಗಳನ್ನ ಡೈರೆಕ್ಟ್‌ ಮಾಡಿದವ್ರು ಎ.ಟಿ ರಘು. ಅದ್ರಲ್ಲೂ ಅವರು ರೆಬೆಲ್‌ ಸ್ಟಾರ್‌ ಅಂಬರೀಶ್‌ ಜೊತೆಗೆ ಸಿನಿಮಾ ಮಾಡಿದ್ದೇ ಹೆಚ್ಚು. ಅಂದು ಸೂರ್ಯೋದಯದಂತಹ ಸಿನಿಮಾ ಮಾಡಿದ ಈ ನಿರ್ದೇಶಕನ ಬಾಳಲ್ಲಿ ಈಗ ವಿಧಿ ಕತ್ತಲು ಬೆಳಕಿನ ಆಟವಾಡ್ತಿದೆ. ಮೊದಲು ಕಿಡ್ನಿ ವೈಫಲ್ಯ, ಆಮೇಲೆ ಹೃದಯಾಘಾತ. ಒಂದಾದ ಮೇಲೊಂದರಂತೆ ಕಷ್ಟಗಳು ಅವರ ಬಾಳಲ್ಲಿ ಆಟವಾಡ್ತಿವೆ. ಇಂದಿನ ಅವರ ಸ್ಥಿತಿ ಹಾಸಿಗೆಯಿಂದ ಮೇಲೆಳಲೂ ಕಷ್ಟಪಡುವಂತಾಗಿದೆ. ಅದೆಷ್ಟೋ ನಟರಿಗೆ ಌಕ್ಷನ್‌ ಕಟ್‌ ಹೇಳಿದ ರಘು ಅವ್ರಿಗೆ ಈಗ ಮಾತೂ ಹೊರ ಬರದ ದುಸ್ಥಿತಿ. ಪದೇ ಪದೇ ಕೆಡ್ತಿರೋ ಆರೋಗ್ಯದಿಂದ ನಷ್ಟದ ಮೇಲೆ ನಷ್ಟ ಅನುಭವಿಸಿದ್ದಾರೆ. ಅಲ್ಲದೆ ಆರ್ಥಿಕವಾಗಿ ತೀರಾ ಕುಗ್ಗಿ ಹೋಗಿದ್ದಾರೆ ಡೈರೆಕ್ಟರ್​ ರಘು. ಕನ್ನಡ ಸಿನಿ ರಸಿಕರನ್ನು ರಂಜಿಸಿದ್ದ ಅವರಿಗೆ ಈಗ ಹಾರೈಕೆ ಜೊತೆಗೆ ಹಣಕಾಸಿನ ನೆರವೂ ಬೇಕಿದೆ. ಅದಕ್ಕಾಗಿ ಅಭಿಮಾನಿಗಳ ಹೃದಯ ಅವರಿಗಾಗಿ ಮಿಡಿಯಲೇ ಬೇಕಿದೆ. ರಘು ಅವ್ರಿಗೆ ಆರ್ಥಿಕ ನೆರವು ನೀಡಲು ಇಚ್ಛಿಸೋ ಅಭಿಮಾನಿಗಳು ಈ ಕೆಳಗೆ ನೀಡಲಾಗಿರುವ ಅವರ ಅಕೌಂಟ್‌ ನಂಬರ್‌ಗೆ ಹಣವನ್ನ ಕಳುಹಿಸಬಹುದು.

ನೆರವು ನೀಡಲು ಇಚ್ಛಿಸುವವರು
ಎ.ಟಿ ರಘು
ಕೋಟಕ್‌ ಮಹೀಂದ್ರ ಬ್ಯಾಂಕ್‌
ಮಡಿಕೇರಿ ಶಾಖೆ
ಅಕೌಂಟ್‌ ನಂಬರ್‌ – 144010031268
IFSC CODE- KKBK0008272

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv