ಡಿಕೆ- ರಿಯಲ್​ ಜೆಂಟಲ್​ಮನ್​..!

ಸಾಮರಸ್ಯ, ಒಗ್ಗಟ್ಟು ಹಾಗೂ ಮನರಂಜನೆ – ಎಲ್ಲವನ್ನ ಪ್ರತಿಬಿಂಬಿಸುವುದು ಕ್ರೀಡೆ. ಇನ್ನೂ, ಆಟಗಳಲ್ಲಿ ಕ್ರೀಡಾಸ್ಪೂರ್ತಿ ಮೆರೆಯುವುದು ಪ್ರತಿಯೊಬ್ಬ ಆಟಗಾರನ ಕರ್ತವ್ಯವೂ ಹೌದು.
ಸದ್ಯ, 2010ರ ನಂತರ ಮತ್ತೆ ಟೆಸ್ಟ್​ ಕಣಕ್ಕೆ ಎಂಟ್ರಿ ಪಡೆದಿರುವ ದಿನೇಶ್​ ಕಾರ್ತಿಕ್​ ಅಂತಹ ಒಂದು ಕ್ರೀಡಾಸ್ಪೂರ್ತಿ ಮೆರೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೆಂಟಲ್​ಮೆನ್​ ಗೇಮ್​ ಕ್ರಿಕೆಟ್​​ನ ಜೆಂಟಲ್​ಮನ್​ ಅಂತ ಡಿಕೆ ಗುರುತಿಸಿಕೊಳ್ತಿದ್ದಾರೆ. ಇದಕ್ಕೆಲ್ಲ ಕಾರಣ ಏನು ಗೊತ್ತಾ..?

ವಿಜಯ್​ ಶತಕಕ್ಕೆ ಕ್ಲ್ಯಾಪ್ಸ್​ ಮಾಡಿದ ಕಾರ್ತಿಕ್​
ಇನ್ನು, ದಿನೇಶ್​ ಕಾರ್ತಿಕ್​ ವೈಯಕ್ತಿಕ ಬದುಕಿನ ಕೋಲಾಹಲಕ್ಕೆ ಮುರುಳಿ ವಿಜಯ್​ ಕಾರಣರಾಗಿದ್ದು ಬಹುತೇಕ ಎಲ್ಲರಿಗೂ ಗೊತ್ತಿದ್ದದ್ದೇ..! ದಿನೇಶ್​ ಕಾರ್ತಿಕ್​ ಅವರ ಮೊದಲ ಪತ್ನಿ ಕಾರ್ತಿಕ್​​​ಗೆ ಡಿವೋರ್ಸ್​ ನೀಡಿ ಮುರಳಿ ವಿಜಯ್​ ಕೈಹಿಡಿದಿದ್ದು ಈಗ ಹಳೇ ಮಾತು. ಈ ಘಟನೆಯ ನಂತರ, ಈ ಇಬ್ಬರೂ ಕ್ರಿಕೆಟರ್ಸ್​ ಡ್ರೆಸ್ಸಿಂಗ್​ ರೂಮ್​ ಹಂಚಿಕೊಂಡಿದ್ದೇ ವಿರಳ. ಆದರೆ, ವೈಯಕ್ತಿಕ ವೈಮನಸ್ಸುಗಳನ್ನೆಲ್ಲ ಮರೆತ ದಿನೇಶ್​ ಕಾರ್ತಿಕ್​, ಮುರುಳಿ ವಿಜಯ್​ ಶತಕಕ್ಕೆ ಚಪ್ಪಾಳೆ ತಟ್ಟಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಅಫ್ಘಾನ್​ ವಿರುದ್ಧದ ಟೆಸ್ಟ್​​ನ ಮೊದಲ ದಿನದಾಟದಲ್ಲಿ ಭರ್ಜರಿ ಶತಕ ಸಿಡಿಸಿ ಮುರುಳಿ ವಿಜಯ್​ ಸಾಕಷ್ಟು ಪ್ರಶಂಸೆಗೆ ಒಳಗಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv