ಶೃಂಗೇರಿ ಶಾರದಾಂಬೆ ದರ್ಶನ ಪಡೆದ ದಿನೇಶ್ ಗುಂಡೂರಾವ್

ಚಿಕ್ಕಮಗಳೂರು: ರಾಜ್ಯ ಕೆಪಿಸಿಸಿಯ ನೂತನ ಅಧ್ಯಕ್ಷ ರಾಗಿ ಆಯ್ಕೆಯಾಗಿರುವ ಶಾಸಕ ದಿನೇಶ್ ಗುಂಡೂರಾವ್ ಅವರು ತಮ್ಮ ಕುಟುಂಬ ಸಮೇತರಾಗಿ ಶೃಂಗೇರಿ ಶಾರದಾಂಬೆ ದರ್ಶನ ಪಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದಿನೇಶ್ ಗುಂಡೂರಾವ್ ಅವರ ಪತ್ನಿ ತಬು ರಾವ್ ಅವರ ಹುಟ್ಟು ಹಬ್ಬದ ದಿನವೇ ಅಧ್ಯಕ್ಷರಾಗಿ ಆಯ್ಕೆ ಆಗಿರೋದು ವಿಶೇಷವಾಗಿದ್ದು ದೇವಾಲಯ ಭೇಟಿ ವೇಳೆ ಧರ್ಮಪತ್ನಿ ತಬು​ ರಾವ್ ಹೆಸರಿನಲ್ಲಿಯೂ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದಂಪತಿಯ ಮಕ್ಕಳಾದ ಅನನ್ಯ ರಾವ್ ಮತ್ತು ಅಮಿರಾ ರಾವ್ ಕೂಡ ಜೊತೆಗಿದ್ದರು. ವಿಶೇಷ ಪೂಜೆಯ ಬಳಿಕ ದಂಪತಿ ಭಾರತಿ ತೀರ್ಥ ಸ್ವಾಮೀಜಿಯ ಆಶೀರ್ವಾದ ಪಡೆದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv