ರಮೇಶ್ ಜಾರಕಿಹೊಳಿ ಯಾವ ನಿರ್ಧಾರ ಬೇಕಾದ್ರೂ ತೆಗೆದುಕೊಳ್ಳಬಹುದು-ದಿನೇಶ್ ಗುಂಡೂರಾವ್

ಬೆಂಗಳೂರು: ರಮೇಶ್ ಜಾರಕಿಹೊಳಿಯವರು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದು. ಈಗಾಗಲೇ ಅವರನ್ನ ಹಲವು ಭಾರಿ ಮನವೊಲಿಸುವ ಪ್ರಯತ್ನ ಮಾಡಿದ್ದೆವು. ಚುನಾವಣಾ ಫಲಿತಾಂಶ ಬರಲಿ ಮುಂದೆ ನೋಡೋಣ ಅಂತಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಅವರು ಒಂದೊಂದು ದಿನ ಒಂದೊಂದು ಹೇಳಿಕೆ ನೀಡ್ತಾರೆ. ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿ. ಮುಂದೆ ಕೇಂದ್ರದಲ್ಲಿ ಹೊಸ ಸರ್ಕಾರ ಬರಲಿದೆ. ಆಗ ಆಪರೇಷನ್ ಕಮಲವೂ ಬಿದ್ದು ಹೋಗಲಿದೆ. ಬಿಜೆಪಿ ಬಲವೂ ಕುಗ್ಗಿ ಹೋಗಲಿದೆ ಅಂತಾ ಹೇಳಿದರು. ಇದೇ ವೇಳೆ, ಬಿಜೆಪಿಯವರು ಕೂಡ ನಮ್ಮ ಪಕ್ಷಕ್ಕೆ ಬರಲು ಕಾಯುತ್ತಿದ್ದಾರೆ. ಮೋದಿ, ಅಮಿತ್ ಶಾ ಡಿಕ್ಟೇಟರ್ ಶಿಪ್ ಹಾಗೂ ಯಡಿಯೂರಪ್ಪನವರ ಅಧಿಕಾರದ ದುರಾಸೆ ಕೆಲವೇ ದಿನಗಳಲ್ಲಿ ಮುಕ್ತವಾಗಲಿದೆ ಅಂತಾ ದಿನೇಶ್ ಗುಂಡೂರಾವ್ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv