‘ಆನಂದ್ ಸಿಂಗ್-ಗಣೇಶ್​​ ಮಧ್ಯೆ ವೈಯಕ್ತಿಕ ಕಾರಣಕ್ಕೆ ಗಲಾಟೆಯಾಗಿದೆ’

ಹುಬ್ಬಳ್ಳಿ: ಕಂಪ್ಲಿ ಶಾಸಕ ಗಣೇಶ್​​ ಹಾಗೂ ವಿಜಯನಗರ ಶಾಸಕ ಆನಂದ್ ಸಿಂಗ್ ಮಧ್ಯೆ ವೈಯಕ್ತಿಕ ಕಾರಣಗಳಿಂದ ಗಲಾಟೆಯಾಗಿದೆ. ಅದೇನೋ ಎರೆಡು ಸೆಕೆಂಡ್ ವಿಡಿಯೋ ಇದೆ. ಅದರಿಂದ ಯಾವುದೂ ಗೊತ್ತಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗಲಾಟೆ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಿಸಿ, ಗೃಹ ಇಲಾಖೆಯಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ವಿಡಿಯೋ ಕುರಿತು ತನಿಖೆ ನಡೆಯುತ್ತೆ‌. ನಾವು ಯಾರನ್ನೂ ರಕ್ಷಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv