ಜನಸ್ನೇಹಿ ಪೊಲೀಸ್​ ವ್ಯವಸ್ಥೆ ಡಿಐಜಿಪಿ ರವಿಕಾಂತೇಗೌಡಗೆ ರಾಷ್ಟ್ರಮಟ್ಟದ ಗೌರವ

ಬೆಳಗಾವಿ: ಜನಸ್ನೇಹಿ ಮತ್ತು ತಳಹಂತದ ಸಿಬ್ಬಂದಿಗಳ ಸಬಲೀಕರಣದ ಯೋಜನೆ ರಾಷ್ಟ್ರೀಯ ಯೋಜನೆ ಎಂದು ನವದೆಹಲಿಯ ಪೊಲೀಸ್​ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಘೋಷಣೆ ಮಾಡಿದೆ.
ರಾಷ್ಟ್ರಾದ್ಯಂತ ನಡೆಯುತ್ತಿರುವ ಪೊಲೀಸ್​ ಸುಧಾರಣ ವಿಚಾರ ಸಂಕೀರಣದಲ್ಲಿ ಈ ಘೋಷಣೆ ಮಾಡಲಾಯಿತು. ಇದರಿಂದಾಗಿ ತಳಹಂತದ ಸಿಬ್ಬಂದಿಗಳಿಗೆ ಮರುಜನ್ಮ ಸಿಕ್ಕಂತೆ ಆಗಿದೆ. ಬೆಳಗಾವಿ ಜಿಲ್ಲಾ ಪೊಲೀಸ್​​ 2016ರಲ್ಲಿ ಜನಸ್ನೇಹಿ ಮತ್ತು ತಳಹಂತದ ಸಿಬ್ಬಂದಿಗಳ ಸಬಲೀಕರಣ ಯೋಜನೆಯನ್ನು ರವಿಕಾಂತೇಗೌಡ ಜಾರಿಗೆ ತಂದಿದ್ದರು. ಇದೊಂದು ರಾಷ್ಟ್ರೀಯ ಯೋಜನೆ, ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೊಳಿಸುವಂತೆ ಪೊಲೀಸ್​ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಸೂಚಿಸಿದೆ. ಅಗ್ನಿಶಾಮಕ ಇಲಾಖೆ ಡಿಐಜಿಪಿ ರವಿಕಾಂತೇಗೌಡರಿಗೆ ಉತ್ತರಖಾಂಡದ ಮಾಜಿ ರಾಜ್ಯಪಾಲ ಕೆ.ಕೆ. ಪೌಲ್​ರಿಂದ ರಾಷ್ಟ್ರ ಮಟ್ಟದ ಗೌರವ ನೀಡಲಾಯಿತು. ರಾಷ್ಟ್ರಮಟ್ಟದಲ್ಲಿ ನೀಡುವ ಮಹಾನಿರ್ದೇಶಕರ ಪ್ರಶಂಸಾ ಪದಕ ನೀಡಿ ರವಿಕಾಂತೆಗೌಡರನ್ನು ಗೌರವಿಸಲಾಯಿತು.

 

Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv