ಬೆಳಗಿನ ಮ್ಯಾರಥಾನ್ ಓಟಕ್ಕೆ ಹುರುಪು ತುಂಬಿದ ದಿಗಂತ್, ಐದ್ರಿತಾ ರೈ

ರಾಯಚೂರು: ಐಎಂಎ ಸಂಘದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಯಚೂರು ನಗರದಲ್ಲಿ ಐಎಂಎ ಸಂಘದಿಂದ ಮ್ಯಾರಥಾನ್ ಓಟ ಆಯೋಜನೆ ಮಾಡಲಾಗಿತ್ತು. ಮ್ಯಾರಥಾನ್‌ ಓಟಕ್ಕೆ ದಿಗಂತ್ ಐಂದ್ರಿತಾ ರೈ ಚಾಲನೆ ನೀಡಿದ್ರು. ಬಳಿಕ ಓಟದಲ್ಲಿ ನೂರಾರು ಜನರ ಜತೆ ದಿಗಂತ್, ಐಂದ್ರಿತಾ ರೈ ಹೆಜ್ಜೆ ಹಾಕಿದ್ರು..10, 5 ಹಾಗೂ 2 ಕಿ.ಮೀ ದೂರದವರೆಗೂ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶಾಸಕರಾದ ರಾಜುಗೌಡ ಹಾಗು ಡಾ ಶಿವರಾಜ ಪಾಟೀಲ್ ಸೇರಿದಂತೆ ಹಲವು ಮಂದಿ ಓಟದಲ್ಲಿ ಭಾಗಿಯಾಗಿದ್ದರು. ಉಗ್ರರ ದಾಳಿಗೆ ಒಳಗಾದ ಯೋಧರಿಗೆ ನಮನ ಸಲ್ಲಿಸಿರೋ ಬಿಳಿ ಬಣ್ಣದ ಟೀ ಶರ್ಟು ಧರಿಸಿ ಹಲವು ಜನರು ಓಟಕ್ಕೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv