ಈ ದೇವಿಗೆ ನಿಗಿನಿಗಿ ಕೆಂಡವೇ ನೈವೇದ್ಯ..!

ಚಾಮರಾಜನಗರ: ಭಕ್ತರು ದೇವರಿಗೆ ಹಣ್ಣು, ಹಂಪಲು, ವಿಶೇಷ ಅಡುಗೆಗಳನ್ನ ನೈವೇದ್ಯವಾಗಿ ಅರ್ಪಿಸುವುದು ಸಾಮಾನ್ಯ. ಕೆಲವೊಂದು ಕಡೆ ದೇವರಿಗೆ ಹೆಂಡ ಕೂಡ ಅರ್ಪಿಸೋದಿದೆ. ಆದ್ರೆ ಚಾಮರಾಜನಗರದಲ್ಲಿ ದೇವಿಗೆ ಬೆಂಕಿಯ ಕೆಂಡವನ್ನೇ ನೈವೇದ್ಯವಾಗಿ ನೀಡಲಾಗುತ್ತೆ. ಅಚ್ಚರಿ ಅನ್ಸಿದ್ರೂ ಇದು ಸತ್ಯ.

ಈ ರೀತಿ ಕೆಂಡವನ್ನೇ ನೈವೇದ್ಯವಾಗಿ ಪಡೆಯುವವಳು ತೆಳ್ಳನೂರು ಗ್ರಾಮದ ಉರುಕತ್ತಾಶ್ವೇರಿ. ವರ್ಷಕೊಮ್ಮೆ ನಡೆಯುವ ಗ್ರಾಮದೇವತೆ ಉರುಕತ್ತಾಶ್ವೇರಿ ಉತ್ಸವದಲ್ಲಿ ದೇವಿಗೆ ಹಣ್ಣು ಹಂಪಲು ನೀಡೋ ಬದಲು ಕೆಂಡವನ್ನೇ ನೈವೇದ್ಯವಾಗಿ ಸಮರ್ಪಿಸುತ್ತಾರೆ. ದೇವಾಲಯದಲ್ಲಿ ನಡೆಯುವ ಕೆಂಡೋತ್ಸವಕ್ಕಾಗಿ ಮರಗಳನ್ನ ತಂದು ಬೆಂಕಿ ಹಾಕಲಾಗುತ್ತೆ. ನಂತರ ದೇವಾಲಯದಲ್ಲಿ ಪ್ರಧಾನ ಅರ್ಚಕರು ಬೆಂಕಿ ಕೆಂಡದ ಮುಂದೆ ಕುಳಿತು ದೇವಿಯನ್ನ ಗ್ರಾಮಕ್ಕೆ ಬರುವಂತೆ ಬೇಡಿಕೊಳ್ಳುತ್ತಾರೆ. ಈ ಪದ್ಧತಿ ತಲೆತಲಾಂತರದಿಂದ ನಡೆದುಕೊಂಡು ಬರ್ತಿದೆ.

Leave a Reply

Your email address will not be published. Required fields are marked *