ಅರಸಿಕೆರೆ ಗ್ರಾಮದಲ್ಲಿ ವಿಶಿಷ್ಟ ಜಾತ್ರೆ.. ಭಕ್ತರ ಮೇಲೆ ನಡೆದಾಡುವ ಪೂಜಾರಿ!

ದಾವಣಗೆರೆ: ಹರಪನಹಳ್ಳಿ ತಾಲೂಕಿನ ಅರಸಿಕೆರೆ ಗ್ರಾಮ ದೇವತೆ ದಂಡಿ ದುರ್ಗಮ್ಮ ಜಾತ್ರೆ ವಿಶಿಷ್ಟವಾಗಿ ನಡೆಯಿತು. ಹಲವು ವರ್ಷಗಳಿಂದ ಈ ಜಾತ್ರೆ ನಡೆದುಕೊಂಡು ಬಂದಿದೆ. ಗಂಗೆಗೆ ಪೂಜೆ ಸಲ್ಲಿಸಿ ವಾಪಸ್ಸಾಗುವಾಗ ಭಕ್ತರ ಮೇಲೆ ಪೂಜಾರಿ ನಡೆಯುತ್ತಾರೆ. ಕಿಲೋ ಮೀಟರ್ ಗಟ್ಟಲೆ ಭಕ್ತರು ಮಲಗುತ್ತಾರೆ. ಇವರ ಮೇಲೆ ಪೂಜಾರಿ ನಡೆಯುತ್ತಾರೆ. ಇದರಿಂದ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.