ಮೈತ್ರಿ ಅಭ್ಯರ್ಥಿ ಧ್ರುವನಾರಾಯಣ್​ಗೆ ಬೆಂಕಿ ಮಹದೇವ್ ಕುಟುಂಬದ ಬೆಂಬಲ

ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಧ್ರುವನಾರಾಯಣ್ ಗೆ ಮಾಜಿ ಸಚಿವ ದಿ. ಬೆಂಕಿ ಮಹದೇವ್ ಕುಟುಂಬದ ಬೆಂಬಲ ದೊರೆತಿದೆ. ನಂಜನಗೂಡಿನಲ್ಲಿರುವ ಬೆಂಕಿ ಮಹದೇವ್ ಮನೆಗೆ  ಇಂದು ಧ್ರುವನಾರಾಯಣ್ ಭೇಟಿ ನೀಡಿ, ಮಾಜಿ ಸಚಿವರ ಪತ್ನಿ ಜಯಮ್ಮ, ಪುತ್ರ ಅಲಂಕಾರ್ ಜೊತೆ ಚರ್ಚೆ ನಡೆಸಿದ್ರು. ಈ ವೇಳೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಧ್ರುವನಾರಾಯಣ್ ಮನವಿ ಮಾಡಿದ್ದು,  ಮನವಿಗೆ ಸ್ಪಂದಿಸಿದ ಕುಟುಂಬಸ್ಥರು, ಧ್ರುವನಾರಾಯಣ್ ಪರ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv