ಮಾವನ ಮಗಳ ಹುಟ್ಟುಹಬ್ಬದಲ್ಲಿ ಧ್ರುವಾ ಸರ್ಜಾ..!

ಸೌತ್ ಇಂಡಿಯಾದ ಜನಪ್ರಿಯ ಕಲಾ ಕುಟುಂಬದಲ್ಲಿ ಸರ್ಜಾ ಕುಟುಂಬವೂ ದೊಡ್ಡದು. ಮೂರು ತಲೆಮಾರಿನಿಂದ ಜನರನ್ನು ಸರ್ಜಾ ಫ್ಯಾಮಿಲಿ ರಂಜಿಸುತ್ತಲಿದೆ. ಮಾವ ಅರ್ಜುನ್ ಸರ್ಜಾ ಹಾದಿಯಲ್ಲೇ ಧ್ರುವಾ ಸರ್ಜಾ ಕೂಡ ಕನ್ನಡಿಗರ ಮನಸೆಳೆಯುತ್ತಿದ್ದಾರೆ. ಇನ್ನು ‘ಪೊಗರು’ ಶೂಟಿಂಗ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಧ್ರುವಾ ಮಾವನ ಮಗಳ ಹುಟ್ಟುಹಬ್ಬಕ್ಕೆ ಚೈನ್ನೈಗೆ ಹಾರಿದ್ದಾರೆ.

ಅಂಜನಾ ಸರ್ಜಾ ಬರ್ತ್ ಡೇ..!
ಈಚೆಗಷ್ಟೇ ಅರ್ಜುನ್​ ಸರ್ಜಾ ತಾಯಿ, ಪತ್ನಿಯ ಹುಟ್ಟುಹಬ್ಬ ಅದ್ಧೂರಿಯಾಗಿ ನಡೆದಿತ್ತು. ಇಂದು ಅರ್ಜುನ್​ ದ್ವಿತೀಯ ಪುತ್ರಿ ಅಂಜನಾ ಹುಟ್ಟುಹಬ್ಬ. ಹೀಗಾಗಿ ನೆನ್ನೆ ರಾತ್ರಿಯೇ ಇಡೀ ಫ್ಯಾಮಿಲಿ ಜೋರು ಸೆಲೆಬ್ರೇಷನ್ ಆಚರಿಸಿದೆ. ಧ್ರುವಾ ಸರ್ಜಾ ಕೂಡ ಸಂಭ್ರಮದಲ್ಲಿದ್ದು, ಹಾಡು- ಕುಣಿತದಲ್ಲೂ ಭಾಗಿಯಾಗಿದ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv