ಮಾಹಿಯ ದೇಶಾಭಿಮಾನಕ್ಕೆ ಅಭಿಮಾನಿಗಳ ಶಹಬ್ಬಾಸ್​

ಹ್ಯಾಮಿಲ್ಟನ್​ : ಟೀಮ್​ ಇಂಡಿಯ ಮಾಜಿ ಕ್ಯಾಪ್ಟನ್​ ಹಾಗೂ ವಿಕೆಟ್​ ಕೀಪರ್​ ಧೋನಿ ಅಂದ್ರೆ ಕ್ರೀಡಾಭಿಮಾನಿಗಳಿಗೆ ಎಲ್ಲಿಲ್ಲದ ವ್ಯಾಮೋಹ. ಅವರ ಬ್ಯಾಟಿಂಗ್​, ಕೀಪಿಂಗ್​ ಶೈಲಿಗೆ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಭಾನುವಾರ ನ್ಯೂಜಿಲೆಂಡ್​ನ ಹ್ಯಾಮಿಲ್ಟನ್​ನಲ್ಲಿ ಕಿವೀಸ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭಾರತ ವೀರೋಚಿತ ಸೋಲನುಭವಿಸಿತು. ಆದ್ರೆ, ಈ ಪಂದ್ಯದಲ್ಲಿ ನಡೆದ ಒಂದು ಘಟನೆಯಿಂದ ಮಾಹಿ ಮಾತ್ರ ಅಭಿಮಾನಿಗಳ ಮನಸು ಗೆದ್ದಿದ್ದಾರೆ.
ಪಂದ್ಯದ ವೇಳೆ ಅಭಿಮಾನಿಯೊಬ್ಬ ಸ್ಟೇಡಿಯಂನಲ್ಲಿದ್ದ ಸೆಕ್ಯೂರಿಟಿಯನ್ನೂ ಲೆಕ್ಕಿಸದೆ ಪಿಚ್​ಗೆ ನುಗ್ಗಿದ್ದ. ಧೋನಿಯ ಅಭಿಮಾನಿ, ತನ್ನ ನೆಚ್ಚಿನ ಆಟಗಾರನ ಪಾದಕ್ಕೆ ಬಿದ್ದು ನಮಸ್ಕಾರ ಮಾಡಿದ. ಆದ್ರೆ ಈ ವೇಳೆ ಆತ ಒಂದು ತಪ್ಪು ಮಾಡಿದ್ದ. ಪಿಚ್​ಗೆ ಬಂದ ಅಭಿಮಾನಿಯ ಕೈಯಲ್ಲಿ ಭಾರತದ ತ್ರಿವರ್ಣ ಧ್ವಜವಿತ್ತು. ಪಿಚ್​ಗೆ ಬಂದೋನೆ ಧೋನಿ ಪಾದಕ್ಕೆ ಎರಗಿದ್ದ. ಈ ವೇಳೆ ಆತನ ಕೈಯಲ್ಲಿದ್ದ ತಿರಂಗಾ, ಧೋನಿಯ ಕಾಲಿಗೆ ತಗುಲಿದೆ. ಕೂಡಲೇ ಎಚ್ಚೆತ್ತ ಮಾಹಿ, ತ್ರಿವರ್ಣ ಧ್ವಜವನ್ನ ಅಭಿಮಾನಿಯ ಕೈಯಿಂದ ತೆಗೆದುಕೊಂಡು ಮೇಲೆತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನ ನೋಡಿದ ಧೋನಿ ಅಭಿಮಾನಿಗಳು, ಮಾಹಿಯ ದೇಶಾಭಿಮಾನಕ್ಕೆ ಶಹಬ್ಬಾಸ್ ಅಂತ ಪ್ರಶಂಸೆಯ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv