ಚಾಹರ್​ ಮೇಲೆ ಧೋನಿ ಸಿಟ್ಟಾದ್ರು, ಆಮೇಲೆ ಅಪ್ಪಿಕೊಂಡ್ರು..!

ಚೆನ್ನೈ: ಕ್ರೀಡಾಂಗಣದಲ್ಲಿ ಎಂತಹದೇ ಒತ್ತಡದ ಪರಿಸ್ಥಿತಿ ಬಂದರೂ ಎಂ.ಎಸ್​.ಧೋನಿ ಸಖತ್ ಕೂಲ್ ಆಗಿ ನಿಭಾಯಿಸುತ್ತಾರೆ. ಹೀಗಾಗಿ ಎಲ್ರೂ ಪ್ರೀತಿಯಿಂದ ಧೋನಿಯನ್ನು ಕ್ಯಾಪ್ಟನ್ ಕೂಲ್ ಅಂತಾ ಕರೆಯುತ್ತಾರೆ. ಆದ್ರೆ ಕಿಂಗ್ಸ್​ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಪಂದ್ಯದಲ್ಲಿ ಮಾಹಿಯ ತಾಳ್ಮೆ ಕೆಟ್ಟಿತ್ತು. ಸಿಎಸ್​ಕೆ ವಿರುದ್ಧ ಗೆಲ್ಲಲು ಪಂಜಾಬ್​ಗೆ ಕೊನೆಯ 2 ಓವರ್​ಗಳಲ್ಲಿ 39 ರನ್​ಗಳ ಅವಶ್ಯಕತೆಯಿತ್ತು. 19ನೇ ಓವರ್​ ಬೌಲಿಂಗ್ ಮಾಡಲು ಇಳಿದಿದ್ದ ದೀಪಕ್ ಚಾಹರ್ ಎರಡು ಬೀಮರ್​ ಎಸೆತ ಎಸೆದಿದ್ದರಿಂದ ಪಂಜಾಬ್ ಸುಲಭವಾಗಿ 8 ರನ್ ಗಳಿಸಿತ್ತು. ಬೀಮರ್​ ಎಸೆದಿದ್ದಕ್ಕೆ ಅಂಪೈರ್​ ವಾರ್ನಿಂಗ್​ ಬೇರೆ ನೀಡಿದ್ದರು. ಬಳಿಕ ಚಾಹರ್ ಬಳಿ ತೆರಳಿದ ಧೋನಿ ಅವರ ಮೇಲೆ ಗರಂ ಆಗಿದ್ರು. ಆದರೂ ತನ್ನ ಜವಾಬ್ದಾರಿ ಗೊತ್ತಿದ್ದ ಧೋನಿ ಧೈರ್ಯ ಕೂಡ ತುಂಬಿದ್ರು.

ಮ್ಯಾಚ್​ ಮುಗಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಚಾಹರ್, ನಾನು ಬೀಮರ್​​ ಎಸೆದು ಉಚಿತ ರನ್​ ನೀಡಿದಾಗ ಧೋನಿ ಭಾಯ್​ ನನ್ನ ಮೇಲೆ ಸಿಟ್ಟಾದರು. ಆದ್ರೆ ನಂತರದ ಎಸೆತಗಳನ್ನು ನಾನು ಚೆನ್ನಾಗಿ ಬೌಲ್ ಮಾಡಿದೆ. ಕೊನೆಗೆ ಮ್ಯಾಚ್​ ಮುಗಿದ ಬಳಿಕ ಧೋನಿ ಭಾಯ್ ನಗುತ್ತಾ, ನನ್ನನ್ನು ಅಪ್ಪಿಕೊಂಡು ವೆಲ್​ ಡನ್​. ಇನ್ನು ಮುಂದೆಯೂ ಟೂರ್ನಿಯಲ್ಲಿ ಹೀಗೆ ಚೆನ್ನಾಗಿ ಬೌಲ್ ಮಾಡು ಎಂದು ಪ್ರೋತ್ಸಾಹಿಸಿದರು. ನಿಜಕ್ಕೂ ಇದು ನನ್ನ ಜೀವನದ ಮರೆಯಲಾಗದ ಕ್ಷಣ ಅಂತಾ ಧೋನಿಯನ್ನ ಕೊಂಡಾಡಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv