ನವರಾತ್ರಿ ಸಂಭ್ರಮ: ಧಾರವಾಡದಲ್ಲಿ ಮಹಿಳೆಯರಿಂದ ಡ್ಯಾನ್ಸ್‌

ಧಾರವಾಡ: ರಾಜ್ಯದೆಲ್ಲೆಡೆ ನಾಡಹಬ್ಬ ದಸರಾದ ಸಂಭ್ರಮ ಮನೆ ಮಾಡಿದೆ. ಇದಕ್ಕೆ ಧಾರವಾಡ ಕೂಡ ಹೊರತಾಗಿಲ್ಲ. ನವರಾತ್ರಿ ಹಿನ್ನೆಲೆಯಲ್ಲಿ ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆ ಮಾಡಲಾಗುತ್ತಿದೆ‌. ನಗರದ ನಾರಾಯಣಪುರದಲ್ಲಿ ಮಹಿಳೆಯರು ಚಲನಚಿತ್ರಗಳ ಹಾಡುಗಳಿಗೆ ನರ್ತಿಸುತ್ತಾ ದಸರಾ ಹಬ್ಬವನ್ನ ಆಚರಿಸಿದರು.

ನಗರದ ವೃದ್ಧ ಶ್ರೀನಿವಾಸ ಗಾರ್ಡನ್​ನಲ್ಲಿ ನಾರಾಯಣ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಮಹಿಳೆಯರಿಗಾಗಿ ನವರಂಗ ದಾಂಡಿಯಾ ರಾಸ್ 2018 ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಸುಮಾರು ನೂರಕ್ಕಿಂತ ಹೆಚ್ಚು ಮಹಿಳೆಯರು ಸೇರಿ ಸಮೂಹ ನೃತ್ಯ, ದಾಂಡಿಯಾ ನೃತ್ಯ, ಕೋಲಾಟ ಹೀಗೆ ಹಲವು ಬಗೆಯ ನೃತ್ಯ ಮಾಡುತ್ತಾ ದೇವಿಯ ಆರಾಧನೆ ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.