ಧಾರವಾಡ ಟಿಕೆಟ್ ಗೊಂದಲ ಸಂಜೆ ವೇಳೆಗೆ ನಿವಾರಣೆಯಾಗುತ್ತೆ: ಸಿದ್ದರಾಮಯ್ಯ

ಹುಬ್ಬಳ್ಳಿ: ಧಾರವಾಡ ಕಾಂಗ್ರೆಸ್ ಟಿಕೆಟ್ ಗೊಂದಲ ಇವತ್ತು ಸಂಜೆ ವೇಳೆಗೆ ನಿವಾರಣೆಯಾಗುತ್ತೇ. ಅಭ್ಯರ್ಥಿಗಳ ಬಗ್ಗೆ ನಾವು ನಮ್ಮ ಅಭಿಪ್ರಾಯವನ್ನು ಹೈ ಕಮಾಂಡಿಗೆ ತಿಳಿಸಿದ್ದೇವೆ.ಪಕ್ಷ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ವಿಶ್ವಾಸ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಮಾಧ್ಯಮದರೊಂದಿಗೆ  ಮಾತನಾಡಿದ ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ಸೋಲಿನ ಭಯ ಕಾಡ್ತಾಯಿಲ್ಲಾ. ಯಾಕೆ ಮೋದಿಯವರು ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ..?ಜನರ ಆಸೆಯಂತೆ ಅಮೇಥಿ, ವೈನಾಡಿನಲ್ಲಿ ಸ್ಪರ್ಧೆ ಮಾಡಿದ್ದಾರೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ.  ಜೊತೆಗೆ ದೇಶದಲ್ಲಿ ‌ 300ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಕೆಲ ಕ್ಷೇತ್ರಗಳ, ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitt