ಶಾಕೀರ್ ಸನದಿಗೆ ಒಲಿದ ಅವಳಿ ನಗರದ ಕಾಂಗ್ರೆಸ್​​ ಟಿಕೆಟ್​​​​..!

ಹುಬ್ಬಳ್ಳಿ-ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಯಾರಿಗೆ ಸಿಗಲಿದೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಈ ಕ್ಷೇತ್ರದಲ್ಲಿ ವಿನಯ್​ ಕುಲಕರ್ಣಿಗೆ ಟಿಕೆಟ್ ನೀಡಲಾಗುವುದು ಎಂದೇ ಹೇಳಲಾಗಿತ್ತು. ಆದರೆ, ಕಾಂಗ್ರೆಸ್​ನ ಹೈಕಮಾಂಡ್​ನ ನಾಯಕರು ನಿರೀಕ್ಷೆಯನ್ನು ಸುಳ್ಳು ಮಾಡಿದ್ದು, ಕಾಂಗ್ರೆಸ್​​ ಹಾಗೂ ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಶಾಕೀರ್​​ ಸನದಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಭದ್ರಕೋಟೆಯಾಗಿರುವ ಧಾರಾವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಷಿ ಕಣಕ್ಕಿಳಿದಿದ್ದಾರೆ. ಅವರ ವಿರುದ್ಧ ಇದೀಗ ಅಲ್ಪಸಂಖ್ಯಾತರದ ಕೋಟಾದಡಿ ಶಾಕೀರ್ ಸನದಿಗೆ ಟಿಕೆಟ್​ ನೀಡಲಾಗಿದೆ. ಮಾಜಿ ಸಂಸದ ಐ.ಜಿ.ಸನದಿ ಪುತ್ರ ಶಾಕೀರ್​ ಸನದಿಗೆ ಕಾಂಗ್ರೆಸ್​ ಮಣೆ ಹಾಕಿರುವುದು ಸ್ಥಳೀಯ ನಾಯಕರಲ್ಲಿ ಅಸಮಾಧಾನ ಮೂಡಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.