ಜನೌಷಧಿ ಬಗ್ಗೆ ವೈದ್ಯೆ ಹೇಳೋದನ್ನ ಕೇಳಿದ್ರೆ ಬೆಚ್ಚಿಬೀಳ್ತೀರಾ..!

ಧಾರವಾಡ: ಬಡರೋಗಿಗಳಿಗೆ ಅನುಕೂಲ ಆಗಲಿ ಅಂತ ಕೇಂದ್ರ ಸರ್ಕಾರ ಅತಿ ಕಡಿಮೆ ದರದಲ್ಲಿ ಔಷಧಿ ನೀಡುವ ಜನೌಷಧಿ ಕೇಂದ್ರಗಳನ್ನು ಆರಂಭಿಸಿದೆ. ಆದ್ರೆ ಇದು ಕೆಲವು ವೈದ್ಯರಿಗೆ ಸಹಿಸಲು ಆಗುತ್ತಿಲ್ಲವೇನೋ? ಜನೌಷಧಿ ಮಳಿಗೆಯಲ್ಲಿ ಸಿಗುವ ಔಷಧಿಗಳಿಗೂ ನಮಗೂ ಏನು ಸಂಬಂಧವಿಲ್ಲ ಅನ್ನುವ ರೀತಿ ಕೆಲ ವೈದ್ಯರು ನಡೆದುಕೊಳ್ಳುತ್ತಿದ್ದಾರೆ. ಧಾರವಾಡದ ಮಧುಮೇಹ ತಜ್ಞೆ ಸಂಧ್ಯಾ ಕುಲಕರ್ಣಿ ತಮ್ಮ ಆಸ್ಪತ್ರೆಯ ಆಚೆ ಇಂತಹದೊಂದು ಕರಪತ್ರವನ್ನು ಅಂಟಿಸಿದ್ದಾರೆ. ನೀವು ಜನೌಷಧಿ ಕೇಂದ್ರದಲ್ಲಿ ಅಥವಾ ಯಾವುದೇ ಪರ್ಯಾಯವಾಗಿ ಔಷಧಿಯನ್ನು ತೆಗೆದುಕೊಂಡರೇ ಅದಕ್ಕೆ ನೀವೇ ಜವಾಬ್ದಾರರು. ಒಂದು ವೇಳೆ ಈ ಔಷಧಿಗಳು ಯಾವುದೇ ರೀತಿಯ ಫಲಿತಾಂಶ ನೀಡದಿದ್ದಲ್ಲಿ ನೀವು ನಿಮ್ಮ ವೈದ್ಯರನ್ನು ಕೇಳವಂತಿಲ್ಲ ಅಂತ ಪಾಂಪ್ಲೆಂಟ್​ ಒಂದನ್ನ ಅಂಟಿಸಿದ್ದಾರೆ. ಧಾರವಾಡದ ಟಿಕಾರೆ ರಸ್ತೆಯಲ್ಲಿ ಸಂಧ್ಯಾ ಕುಲಕರ್ಣಿ ಚೇತನಾ ಮಧುಮೇಹ, ಪಾದ ರಕ್ಷಣೆ ಹಾಗೂ ಥೈರಾಯ್ಡ್ ಕ್ಲಿನಿಕ್‌ವೊಂದನ್ನು ಇಟ್ಟುಕೊಂಡಿದ್ದಾರೆ.