ಧಾರವಾಡ ಡಿಸಿ ದೀಪಾ ಚೋಳನ್, ಐಎಎಸ್ ಅಧಿಕಾರಿ ಪತಿ ರಾಜೇಂದ್ರ ಚೋಳನ್ ಮತದಾನ

ಧಾರವಾಡ: ಇಂದು ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಈ ಹಿನ್ನೆಲೆ ಕರ್ನಾಟಕ ಕಾಲೇಜಿನ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಅವರ ಪತಿ, ಹಿರಿಯ ಐಎಎಸ್ ಅಧಿಕಾರಿ, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮತ ಚಲಾಯಿಸಿದ್ರು. ಪತಿ-ಪತ್ನಿ ಇಬ್ಬರೂ ಪ್ರತ್ಯೇಕ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಮತದಾನ ಮಾಡಿದ ಬಳಿಕ ಮಾತನಾಡಿದ ದೀಪಾ ಚೋಳನ್, ಎಲ್ಲೆಲ್ಲಿ‌ ಮಷೀನ್​​ಗಳು ಕೆಟ್ಟಿವೆ ಅಲ್ಲೆಲ್ಲಾ ಮಷೀನ್ ಚೇಂಜ್ ಮಾಡಲಾಗಿದೆ. ಅಲ್ಲೆಲ್ಲ ಮತ್ತೆ ಮತದಾನ ಆರಂಭವಾಗಿದೆ. ಧಾರವಾಡದ ಓಂ ಸ್ಕೂಲ್ ಮತ್ತು ಮೊರಬದಲ್ಲಿ ಮತದಾನ ಆರಂಭವಾಗಿದೆ. ಎವಿಎಂ ಮಷೀನ್ ಬದಲಾಯಿಸಲಾಗಿದೆ ಎಂದು ತಿಳಿಸಿದ್ರು.

ಇನ್ನು ಇದೇ ಮೊದಲ ಬಾರಿಗೆ ಇಬ್ಬರೂ ಮತದಾನ ಮಾಡಿದ್ದೀವಿ. ಶೇ. 100ರಷ್ಟು ಮತದಾನವಾಗುವ ನಿರೀಕ್ಷೆ ಹೊಂದಿದ್ದೀವಿ ಎಂದರು. ಎಲ್ಲರೂ ಮತದಾನ ಮಾಡಿ ಅಂತ ಇದೇ ವೇಳೆ ದೀಪಾ ಚೋಳನ್ ಮನವಿ ಮಾಡಿಕೊಂಡ್ರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv