ಮೆರವಣಿಗೆಯಲ್ಲೇನೋ ಬಂದ, ಆದ್ರೆ ನಾಮಪತ್ರ ತರೋದನ್ನೆ ಮರೆತ..!

ಧಾರವಾಡ: ನಾಮಪತ್ರವನ್ನೇ ಮರೆತು ಬಂದಿದ್ದ ಸ್ವಾರಸ್ಯಕರ ಘಟನೆ ಧಾರವಾಡದಲ್ಲಿ ನಡೆದಿದೆ. ರೈತ ಮುಖಂಡ ಮಲ್ಲಿಕಾರ್ಜುನಗೌಡ ಬಾಳನಗೌಡರ ನಾಮಪತ್ರ ಬಿಟ್ಟು ಬಂದಿದ್ದು, ನಾಮಪತ್ರ ಸಲ್ಲಿಕೆಯ ಸಮಯ ಮುಗಿಯುವ ಹಂತದಲ್ಲೇ ಯಡವಟ್ಟು ಮಾಡಿಕೊಂಡಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ‌ ಬಂದಿದ್ದ ಮಲ್ಲಿಕಾರ್ಜುನಗೌಡರನ್ನು ಚುನಾವಣಾಧಿಕಾರಿ ನಾಮಪತ್ರ ಎಲ್ಲಿ ಅಂತಾ ಕೇಳಿದಾಗ ಒಂದು ಕ್ಷಣ ಅವಕ್ಕಾಗಿದ್ದಾರೆ. ಅಲ್ಲದೇ, ನಾಮಪತ್ರವನ್ನೇ ಬಿಟ್ಟು ಬಂದದ್ದನ್ನು ನೆನಪು ಮಾಡಿಕೊಂಡು ಕ್ಷಣಕಾಲ ಪೇಚಾಡಿದ್ದಾರೆ. ಆಗ ಎಚ್ಚರಗೊಂಡ ಮಲ್ಲಿಕಾರ್ಜುನಗೌಡ, ತನ್ನ ಬೆಂಬಲಿಗನೊಬ್ಬನನ್ನು ನಾಮಪತ್ರ ತರಲು ಕಳಿಸಿದ್ದಾರೆ. ವಿಶೇಷ ಅಂದ್ರೆ ನಾಮಪತ್ರ ತರಲು ಹೋದ ಬೆಂಬಲಿಗನೂ ಮರಳಿ‌ ಬರುವಲ್ಲಿ ವಿಳಂಬ ಮಾಡಿದ್ದು, ಕೊನೆಗೆ ಅಭ್ಯರ್ಥಿಯೇ ಹೊರಗೆ ಹೋಗಿ ನಾಮಪತ್ರ ತಂದು ಉಸ್ಸಪ್ಪಾ.. ಅಂತಾ ನಾಮಪತ್ರ ಸಲ್ಲಿಸಿ, ನಿಟ್ಟುಸಿರು ಬಿಟ್ಟಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv