ಕಟ್ಟಡ ದುರಂತ ಪ್ರಕರಣ, ಪರಿಹಾರದ ಮೊತ್ತ ₹4 ಲಕ್ಷಕ್ಕೆ ಏರಿಕೆ

ಧಾರವಾಡ: ನಗರದ ಕುಮಾರೇಶ್ವರನಗರ ಕಟ್ಟಡ ದುರಂತ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ಪರಿಹಾರದ‌ ಮೊತ್ತದಲ್ಲಿ 2 ಲಕ್ಷ ಏರಿಕೆ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಇದರಿಂದ ಈಗ  ಪರಿಹಾರ ಮೊತ್ತ 4ಲಕ್ಷಕ್ಕೆರಿದೆ. ಇನ್ನು ಘಟನೆಯಲ್ಲಿ ತೀವ್ರ ಗಾಯಗೊಂಡ 15 ಜನರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡಲು ಆದೇಶ ಈ ಹಿಂದೆ ಆದೇಶ ಹೊರಡಿಸಲಾಗಿತ್ತು. ಆ ಈ‌ ಪರಿಹಾರ ಹಣ ಕಟ್ಟಡದ ಮಾಲೀಕರಿಂದ, ಮುಂದಿನ ದಿನಗಳಲ್ಲಿ  ಹಣ ವಸೂಲಿ ಮಾಡುವ ಬಗ್ಗೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv