ಮಗ ಸುರಕ್ಷಿತವಾಗಿ ಬರಲಿ ಎಂದು ದೇವರ ಮೊರೆ ಹೋದ ತಾಯಿ..!

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದ ದುರಂತದಲ್ಲಿ ಅವಶೇಷಗಳಡಿ ಸಿಲುಕಿರುವ ತಮ್ಮ ಮಗ ಸುರಕ್ಷಿತವಾಗಿ ಮರಳಿ‌ ಬರಲೆಂದು ತಾಯಿಯೊಬ್ಬರು ದೇವರ ಮೊರೆ ಹೋಗಿರುವ ಕರುಣಾಜನಕ ಘಟನೆ ನಡೆದಿದೆ. ನಿನ್ನೆ ಅನೂಪ ಕಂಪ್ಯೂಟರ್ ಕ್ಲಾಸ್‌ನಲ್ಲಿರುವಾಗ ಕಟ್ಟಡ ಕುಸಿದು ಅಲ್ಲೆ ಸಿಲುಕಿ ಕೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವ ಅನೂಪ ಸುರಕ್ಷಿತದಿಂದ ವಾಪಸ್ ಬರಲಿ ಅಂತಾ ತಾಯಿ ರೇಖಾ ದೇವರಿಗೆ ಮೊರೆ ಹೋಗಿದ್ದಾರೆ. ಅನೂಪ ಕುಸಿದು ಬಿದ್ದಿರುವ ಕಟ್ಟಡದಲ್ಲಿ ಕಂಪ್ಯೂಟರ್ ಸೆಂಟರ್‌ ಇಟ್ಟುಕೊಂಡಿದ್ದರು. ಕಾರ್ಯಾಚರಣೆ ನಡೆದಿರುವ ಪಕ್ಕದಲ್ಲಿರುವ ಕಾರ್ ಷೋ ರೋಮ್‌ನಲ್ಲಿ ತಾಯಿ ರೇಖಾ ದೇವರಿಗೆ ಮೊರೆ ಹೋಗಿದ್ದಾರೆ. ಕಾರ್ ಷೋ ರೂಮ್‌ನಲ್ಲಿ ಗಣಪತಿ, ಲಕ್ಷ್ಮಿ , ಸರಸ್ವತಿ ಹಾಗೂ ಸಾಯಿಬಾಬಾ ಫೋಟೋಗೆ ದೀಪ ಬೆಳಗಿ, ಮಗ ಸುರಕ್ಷಿತವಾಗಿ ಬರಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv