ಕಟ್ಟಡ ಕುಸಿತ ಪ್ರಕರಣ: ಮೃತರ ಸಂಖ್ಯೆ 16ಕ್ಕೆ ಏರಿಕೆ

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಮತ್ತೊಂದು ಶವವನ್ನು ನಿನ್ನೆ ಮಧ್ಯರಾತ್ರಿ 2 ಗಂಟೆಗೆ ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. 16ನೇ ಮೃತದೇಹದ ಗುರುತು ಪತ್ತೆಯಾಗಿದ್ದು, ಮೃತ ಯುವಕನನ್ನು ಈರಪ್ಪ ಹಡಪದ(28) ಎಂದು ಗುರುತಿಸಲಾಗಿದೆ. ಇವರು ಕಟ್ಟಡದ ಗೌಂಡಿ ಕೆಲಸಕ್ಕೆ ಬಂದಿದ್ದರು. ಬೈಲಹೊಂಗಲ ತಾಲೂಕಿನ ತುರಕರ ಶೀಗಿಹಳ್ಳಿ ಗ್ರಾಮದವರು ಎನ್ನಲಾಗಿದೆ. ಪೊಲೀಸರು ಅವಶೇಷಗಳಡಿ ಸುರಂಗ ಕೊರೆದು ನಿನ್ನೆ ರಾತ್ರಿ ಈರಪ್ಪ ಹಡಪದ ಶವವನ್ನು ಹೊರತೆಗೆದಿದ್ದಾರೆ. ಕೆಟ್ಟವಾಸನೆ ಬರುತ್ತಿದ್ದರಿಂದ ಬಾಡಿ ಸ್ಪ್ರೇ ಬಳಸಿ ಮೃತದೇಹಗಳನ್ನು ಸಿಬ್ಬಂದಿ ಹೊರತೆಗೆದಿದ್ದಾರೆ.

ಇನ್ನು 6ನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇದುವರೆಗೂ ಒಟ್ಟು 16 ಮೃತದೇಹಗಳು ಪತ್ತೆಯಾಗಿವೆ. ಅವಶೇಷಗಳಡಿ ಸಿಲುಕಿರುವವರನ್ನು ಹೊರ ತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇನ್ನು 3 ರಿಂದ 4 ಜನ ಅವಶೆಷಗಳಡಿ ಸಿಲುಕಿರುವ ಶಂಕೆ ಇದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv