ಕಟ್ಟಡ ದುರಂತ: ಮೃತರ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ವಿತರಣೆ

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಇಂದು ಪರಿಹಾರ ವಿತರಿಸಿದರು. ಮೃತ ಸಂಗಮೇಶ ಮಾನ್ವಿ ಕುಟುಂಬಕ್ಕೆ ಡಿಸಿ ಪರಿಹಾರ ವಿತರಿಸಿದರು. ಈ ವೇಳೆ ಪತ್ನಿ ವಿಜಯಲಕ್ಷ್ಮಿ ಮಾನ್ವಿ ಅವರನ್ನು  ಸಂತೈಸಿದ ಜಿಲ್ಲಾಧಿಕಾರಿ, ಬಳಿಕ ₹ 2 ಲಕ್ಷ ರೂ.ಗಳ ಪರಿಹಾರ ಚೆಕ್‌ ವಿತರಣೆ ಮಾಡಿದರು. ಮೆಹಬೂಬ್ ನಗರದ ಅಸ್ಲಾಂ ಶೇಖ್ ಅವರ ಪತ್ನಿ ನಾಜಮಿ ಅವರಿಗೆ ಡಿಸಿ ದೀಪಾ ಚೋಳನ್ ಪರಿಹಾರ ವಿತರಣೆ ಮಾಡಿದರು. ಈ ವೇಳೆ ಅಸ್ಲಾಂ ಅವರ ತಾಯಿ ಮಮ್ತಾಜ್ ಬೇಗಂ ಮತ್ತು ಕುಟುಂಬಸ್ಥರಿಗೆ ಜಿಲ್ಲಾಧಿಕಾರಿ ಸಾಂತ್ವನ ಹೇಳಿದರು. ಉಳಿದ ಎಲ್ಲಾ ಮೃತರ ಕುಟುಂಬದವರಿಗೆ ಆಯಾ ತಹಶಿಲ್ದಾರರು ಪರಿಹಾರ ವಿತರಣೆ ಕಾರ್ಯ ಮಾಡಲಿದ್ದಾರೆ. ಮೃತರ ಕುಟುಂಬಸ್ಥರಿಗೆ ₹ 2 ಲಕ್ಷ ರೂ. ಚೆಕ್ ವಿತರಣೆ ಮಾಡಲಾಗುತ್ತಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv