ಕಟ್ಟಡ ದುರಂತ: ಗುಣಮಟ್ಟದಿಂದ ಪೂರ್ಣಗೊಂಡಿದ್ರೆ ಐಷಾರಾಮಿ ಕಟ್ಟಡದಂತೆ ಹೊಳೆಯುತ್ತಿತ್ತು..!

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂಜಿನಿಯರ್ ರಚಿಸಿದ್ದ ಕಟ್ಟಡದ ವಿನ್ಯಾಸದ ಪೋಟೋಗಳು ಲಭ್ಯವಾಗಿವೆ. ಕಟ್ಟಡ ಗುಣಮಟ್ಟದಿಂದ ಪೂರ್ಣಗೊಂಡಿದ್ದರೆ ಐಷಾರಾಮಿ ಕಟ್ಟಡದಂತೆ ಹೊಳೆಯುತಿತ್ತು. ವಿವಿಧ ಹೈಟೆಕ್ ಮಳಿಗೆಗಳು, ಆಫೀಸ್‌ಗಳು, ಶಾಪಿಂಗ್ ಮಾಲ್ ಸೇರಿದಂತೆ ಹಲವು ಕೊಠಡಿಗಳು, ಹೈಟೆಕ್ ಕಾರ್ ಪಾರ್ಕಿಂಗ್ ಸೇರಿದಂತೆ ಐಶಾರಾಮಿ ಕಟ್ಟಡ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಆದ್ರೆ ಕಂಪ್ಯೂಟರ್ ಡೈಗ್ರಾಮ್‌ನಲ್ಲಿ ಮಾತ್ರ ಹೈಟೆಕ್ ಕಟ್ಟಡದ ಚಿತ್ರ ಬಿಡಿಸಿ ಆರೋಪಿ ಇಂಜಿನಿಯರ್ ವಿವೇಕ್ ಪವಾರ್ ಯಾಮಾರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಇಂಜಿನಿಯರ್ ವಿವೇಕ್ ಪವಾರ್ ನ್ಯಾಯಾಂಗ ಬಂಧನದಲ್ಲಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv