ಜಮೀನಿಗೆ ಪರಿಹಾರ ನೀಡದ ಹಿನ್ನೆಲೆ ಎ.ಸಿ. ಕಚೇರಿ ಜಪ್ತಿ

ಧಾರವಾಡ: ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಧಾರವಾಡ ಎ.ಸಿ. ಕಚೇರಿಯ ಪೀಠೋಪಕರಣ ಹಾಗೂ ವಾಹನ ಜಪ್ತಿ ಮಾಡಲು, ಎರಡನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಕೋರ್ಟ್ ಸಿಬ್ಬಂದಿ ಇಂದು ಎಸಿ ಕಚೇರಿಯ ಪೀಠೋಪಕರಣ, ಮತ್ತು ಎಸಿ ವಾಹನ ಜಪ್ತಿ ಮಾಡಿದ್ದಾರೆ.
1992ರಲ್ಲಿ ಬಸಯ್ಯ ಮತ್ತು ಸೋಮಯ್ಯ ಎಂಬುವವರಿಗೆ ಸೇರಿದ್ದ, ಧಾರವಾಡ ನಗರದ ಸುತಗಟ್ಟಿ ಬಡಾವಣೆಯಲ್ಲಿನ 1 ಎಕರೆ 25ಗುಂಟೆ ಜಮೀನನ್ನು, ವಸತಿ ಯೋಜನೆಗೆ ಎಂದು ಜಿಲ್ಲಾಡಳಿತ ತನ್ನ ಸ್ವಾಧೀನಕ್ಕೆ ಪಡೆದಿತ್ತು. ಬಳಿಕ ಬಸಯ್ಯ, ಸೋಮಯ್ಯರಿಗೆ ಇಲ್ಲಿವರೆಗೂ 14 ಲಕ್ಷ ರೂ. ಪರಿಹಾರ ನೀಡದ ಹಿನ್ನೆಲೆ ಎಸಿ ಕಚೇರಿ ಜಪ್ತಿ ಮಾಡಲು ಎರಡನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv