ಬಾಹುಬಲಿಗೆ ಮಸ್ತಕಾಭಿಷೇಕ, ಲೇಸರ್ ಶೋನಲ್ಲಿ ಕಂಗೊಳಿಸಿದ ವೈರಾಗ್ಯ ಮೂರ್ತಿ..!

ಮಂಗಳೂರು: ಧರ್ಮಸ್ಥಳದ ಮಂಜುನಾಥೇಶ್ವರನ ಸನ್ನಿಧಿಯ ರತ್ನಗಿರಿ ಬೆಟ್ಟದಲ್ಲಿ ವೈರಾಗ್ಯ ಮೂರ್ತಿ ಬಾಹುಬಲಿಗೆ‌ ವೈಭವದಿಂದ ಮಸ್ತಕಾಭಿಷೇಕ ನಡೆಯುತ್ತಿದೆ. ಮಸ್ತಕಾಭಿಷೇಕದ ಅಂಗವಾಗಿ ರತ್ನಗಿರಿ ಬೆಟ್ಟದಲ್ಲಿ ಲೇಸರ್ ಶೋ ಕಾರ್ಯಕ್ರಮವನ್ನು ಖ್ಯಾತ ನಟ ರಮೇಶ್ ಅರವಿಂದ್ ಅವರು‌ ಉದ್ಘಾಟಿಸಿದರು. ಲೇಸರ್ ಶೋನಲ್ಲಿ ಭರತ ಬಾಹುಬಲಿ ಯುದ್ಧ, ನಂತರ ವೈರಾಗ್ಯ ಮೂರ್ತಿ ಆಗಿದ್ದನ್ನು ಲೇಸರ್ ಶೋನಲ್ಲಿ‌ ತೋರಿಸಲಾಯಿತು. ಶೋನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ರು. ಇಂದು ಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ‌ಅವರು ಭಾಗವಹಿಸಲಿದ್ದಾರೆ.