ಧರ್ಮಸ್ಥಳ ಒಂದೇ ದೇಶದಲ್ಲಿ ಶುಭ್ರತೆ ಕಾಪಾಡಿರುವ ಕ್ಷೇತ್ರ: ಸದಾನಂದ ಗೌಡ

ಮಂಗಳೂರು:  ಶ್ರೀ ಕ್ಷೇತ್ರ ಧರ್ಮಸ್ಥಳ ಒಂದು ಸಮನ್ವಯದ ತಾಣವಾಗಿದೆ. ಸರ್ಕಾರ ಮಾಡುವ ಕೆಲಸವನ್ನು ವೀರೇಂದ್ರ ಹೆಗ್ಗಡೆಯವರು ಮಾಡಿದ್ದಾರೆ. ದೇಶದಲ್ಲಿ ಶುಭ್ರತೆಯನ್ನು ಕಾಪಾಡಿದ ಕ್ಷೇತ್ರ ಇದೊಂದೆ ಇರುವುದು ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ಮಹಾ ಮಸ್ತಕಾಭಿಷೇಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸದಾನಂದ ಗೌಡರು, ಸ್ವಚ್ಛತೆಯಲ್ಲಿ ದೇವರನ್ನು ಕಾಣುವ ತಾಣ ಧರ್ಮಸ್ಥಳ. ಸ್ವಚ್ಚತೆ ಪರಿಕಲ್ಪನೆಯನ್ನು ಹೆಗ್ಗಡೆಯವರು 30 ವರ್ಷಗಳ ಹಿಂದೆಯೇ ಮಾಡಿದ್ದರು. ಧರ್ಮಸ್ಥಳದಲ್ಲಿ ವಿವಿಧ ಧರ್ಮಗಳ ಸಂಗಮವಾಗುತ್ತದೆ. ಧರ್ಮಸ್ಥಳ ಎಂಬ ಶಬ್ದಕ್ಕೆ ವಿಶೇಷ ಮಹತ್ವವಿದೆ.
ಜನರಿಗೆ ಗ್ರಾಮೀಣಾಭಿವೃದ್ಧಿ, ಸ್ವಾವಲಂಬನೆ ಬದುಕು ನಿರ್ಮಿಸಿಕೊಟ್ಟ ತಾಣ ಇದು. ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸಿದ ಕೀರ್ತಿ ವೀರೇಂದ್ರ ಹೆಗ್ಗಡೆಯವರದ್ದು ಎಂದು  ಸಚಿವ ಡಿವಿ ಸದಾನಂದ ಗೌಡ ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv