ಕುಡಿದು, ತಿಂದುಂಡಿದ್ದಕ್ಕೆ ಬಿಲ್​ ಕೇಳಿದ್ದೇ ತಪ್ಪಾಯ್ತಾ ..?

ಕಲಬುರಗಿ: ಊಟದ ಬಿಲ್ ಕೇಳಿದ್ದಕ್ಕೆ ಯುವಕರ ಗುಂಪೊಂದು ದಾಬಾ ಮಾಲೀಕನ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ನಗರದ ಹೊರವಲಯದಲ್ಲಿರುವ ಏರ್​ಲೈನ್ಸ್ ದಾಬಾದಲ್ಲಿ ಜುಲೈ 3 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಯುವಕರು ದಾಬಾದಲ್ಲಿ ತಿಂದು, ಕುಡಿದಿದ್ದಕ್ಕೆ ಬಿಲ್​​ ಕಟ್ಟುವಂತೆ ಕೇಳಿದ ದಾಬಾ ಮಾಲೀಕ ಅಬ್ದುಲ್ ಲತೀಫ್ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ನಿವಾಸಿ ಶಕೀಲ್ ಮತ್ತು ಆತನ 10ಕ್ಕೂ ಹೆಚ್ಚು ಸ್ನೇಹಿತರು ಬಿಯರ್ ಬಾಟಲ್​ನಿಂದ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಸದ್ಯ ಗಾಯಾಳು ಅಬ್ದುಲ್ ಲತೀಫ್​ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv