ಭದ್ರತಾ ದೃಷ್ಟಿಯಿಂದ ಡಿಜಿಪಿ ಹೇಳಿರಬಹುದು-ಪರಮೇಶ್ವರ್

ತುಮಕೂರು: ಮಾಧ್ಯಮದವರ ಮೇಲೆ ಡಿಜಿಪಿ ನೀಲಮಣಿ ರಾಜು ದರ್ಪ ಮೆರೆದ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಾ. ಜಿ. ಪರಮೇಶ್ವರ್​, ಮಾಧ್ಯಮದವರೊಂದಿಗೆ ವಿಚಾರ ಹಂಚಿಕೊಳ್ಳಬೇಡಿ ಅಂತ ನಾನಾಗಲಿ, ಸಿಎಂ ಕುಮಾರಸ್ವಾಮಿ ಅವರಾಗಲಿ ಹೇಳಿಲ್ಲ ಎಂದು ಹೇಳಿದ್ದಾರೆ.
ಕೊರಟಗೆರೆಯಲ್ಲಿ ಮಾತನಾಡಿದ ಅವರು, ಎಲ್ಲೆಂದರಲ್ಲೇ ಮಾಧ್ಯಮದವರು ಪ್ರತಿಕ್ರಿಯೆ ಕೇಳುತ್ತಾರೆ. ಡಿಜಿಪಿ ಅವರು ಭದ್ರತಾ ದೃಷ್ಟಿಯಿಂದ ಮಾಧ್ಯಮದವರನ್ನು ನಿಯಂತ್ರಿಸಲು ಆ ರೀತಿ ಇಲಾಖೆಗೆ ಹೇಳಿರಬಹುದು ಅಂತ ಹೇಳಿದರು. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಏಕೆ ಆ ರೀತಿ ಮಾತನಾಡಿದರು ಅಂತಾ ವಿಚಾರ ಮಾಡುತ್ತೇನೆಂದು ಉಪಮುಖ್ಯಮಂತ್ರಿ ಪರಮೇಶ್ವರ್​​ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv