ತುಮಕೂರಲ್ಲಿ ದೇವೇಗೌಡರ ಸೋಲು ನಿಶ್ಚಿತ: ಯಡಿಯೂರಪ್ಪ

ದಾವಣಗೆರೆ : ತುಮಕೂರಲ್ಲಿ ದೇವೇಗೌಡರ ಸೋಲು ನಿಶ್ಚಿತ. ಮಂಡ್ಯದಲ್ಲಿ  ಬಿಜೆಪಿ ಬೆಂಬಲದಿಂದ ಸ್ವತಂತ್ರ ಅಭ್ಯರ್ಥಿ ಸುಮಲತಾ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಐಟಿ ದಾಳಿ ಬಗ್ಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದಾರೆ. ಕೆಲವು ಕಾಮಗಾರಿಗಳು  ಪೂರ್ಣವಾಗುವ ಮೊದಲೇ 13040 ಕೋಟಿ ಕಾಮಗಾರಿಯಾಗಿದೆ ಎಂದು ಹಣ ಬಿಡುಗಡೆ ಮಾಡಿದ್ದಾರೆ. ಹಾಸನ ಜಿಲ್ಲೆಯಲ್ಲಿ 5 ಕಾಮಗಾರಿಗಳಿಗೆ  ಹಣ ಪಾವತಿ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಇದನ್ನ ನೋಡಿದರೆ ಮುಂಚಿತವಾಗಿ ಬಿಲ್ ಮಾಡಿದ್ದಾರೆ. ಇದು ಚುನಾವಣೆಗೆ ಹಣ ಹೊಂದಿಸುವ ಕೆಲಸವಾಗಿದೆ ಎಂದರು.

ಕುಮಾರಸ್ವಾಮಿಯನ್ನ ಸಿಎಂ ಮಾಡಿದ್ದೇ ಅಕ್ಷಮ್ಯ ಅಪರಾಧ
ಇನ್ನು ಮುಂದೆ  ಸಿಎಂ ಕುಮಾರಸ್ವಾಮಿಯವರ ಹಗರಣಗಳು ಬಯಲಾಗಲಿವೆ. ಹೀಗಾಗಿ ಇದು 10 % ಅಲ್ಲ 20% ಸರ್ಕಾರ ಎನ್ನುವುದು ಸಾಬೀತಾಗಿದೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿಯವರೇ ಪ್ರತಿಕ್ರಿಯೆ ನೀಡಬೇಕು. ಹೆಚ್.ಡಿ. ಕುಮಾರಸ್ವಾಮಿಯನ್ನ ಸಿಎಂ ಮಾಡಿದ್ದೆ ಅಕ್ಷಮ್ಯ ಅಪರಾಧ. ಅವರು ಅಧಿಕಾರದ ಮದದಿಂದ ಮಾತನಾಡುತ್ತಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ಸಿಎಂ ಕುಮಾರಸ್ವಾಮಿ ಎಲ್ಲಿರುತ್ತಾರೋ ಅಂತಾ ಫಲಿತಾಂಶ ಬಂದ ನಂತರ ಹುಡುಕೋಣ ಎಂದು ಅವರು ವ್ಯಂಗ್ಯವಾಡಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv