ಕನ್ನಡಿ ತೋರಿಸಿ ಟ್ರಾಫಿಕ್ ರೂಲ್ಸ್​ ಪಾಠ..!​

ಟ್ರಾಫಿಕ್​ ರೂಲ್ಸ್​ನಾ ಸರಿಯಾಗಿ ಫಾಲೋ ಮಾಡಿ ಅಂತಾ ಎಷ್ಟು ಬಾರಿ ಹೇಳಿದ್ರು ಜನ ಅದನ್ನ ಮರೆತು ಬಿಡ್ತಾರೆ. ಹೀಗಾಗಿಯೇ ದೆಹಲಿ ಪೊಲೀಸರು ವಿಭಿನ್ನವಾಗಿ ಜಾಗೃತಿ ಮೂಡಿಸೋ ಕೆಲಸ ಮಾಡ್ತಿದ್ದಾರೆ.​ ಕನ್ನಡಿ ತೋರಿಸೋ ಮೂಲಕ ಸಂಚಾರ ಮಾಡುವಾಗ ಹೆಲ್ಮೆಟ್​ ಕಡ್ಡಾಯ ಅನ್ನೋ ಸಂದೇಶ ಸಾರ್ತಿದ್ದಾರೆ.
ಕನ್ನಡಿಗೂ ಹೆಲ್ಮೆಟ್​ಗೂ ಏನು ಸಂಬಂಧ ಆಂತಾ ಅನ್ನಿಸಬಹುದು. ಆದ್ರೆ ಸಂಚಾರಿ ಪೊಲೀಸರು ಮೊದ್ಲು ಕನ್ನಡಿ ತೋರಿಸಿ ಸವಾರ ಅಥವಾ ಹಿಂದೆ ಕುಳಿತವರು ಹೆಲ್ಮೆಟ್​ ಧರಿಸಿಲ್ಲಾ ಅನ್ನೋದನ್ನ ತೋರಿಸ್ತಾರೆ. ಬಳಿಕ ಕನ್ನಡಿ ಯಾವಾಗಲೂ ಸುಳ್ಳು ಹೇಳಲ್ಲ ಅಂತ ಬರೆದ ಹಾಳೆ ತೋರಿಸಿ ಹೆಲ್ಮೆಟ್ ಧರಿಸಿದ ಸವಾರನಿಗೆ ತನ್ನ ತಪ್ಪಿನ ಅರಿವು ಮೂಡುವಂತೆ ಮಾಡಲಾಗುತ್ತದೆ. ನಂತರ ಒಂದರ ನಂತರ ಒಂದು ಹಾಳೆ ಮಗುಚಿ ಹೆಲ್ಮೆಟ್​ ಹೇಗೆ ನಮ್ಮ ಸುರಕ್ಷತೆ ಕಾಪಾಡುತ್ತೆ, ಅದರಲ್ಲೂ ಹೆಲ್ಮೆಟ್​ ಧರಿಸುವಾಗ ಐಎಸ್​ಐ ಮಾರ್ಕ್​ ಇರುವ ಹೆಲ್ಮೆಟನ್ನೇ​ ಧರಿಸಬೇಕು ಅಂತಾನೂ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಒಟ್ನಲ್ಲಿ ಹೆಲ್ಮೆಟ್​ ಧರಿಸಿ ಅಂತಾ ಪೊಲೀಸರು ವಿಧವಿಧವಾಗಿ ಹೇಳಿದ್ರೂ ಜನ ಮಾತ್ರ ಗೊತ್ತೋ, ಗೊತ್ತಿಲ್ಲದೆಯೋ ಮರೆತು ಹೋಗ್ತಾನೆ ಇರ್ತಾರೆ. ಆದರೆ ಪೊಲೀಸರ ಈ ವಿಭಿನ್ನ ಪ್ರಯತ್ನದಿಂದಾದ್ರೂ ಜನರಲ್ಲಿ ಅರಿವು ಮೂಡಬೇಕಿದೆ.

 

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv