ಟಿಕ್​ಟಾಕ್ ವಿಡಿಯೋ ಮಾಡಲು ಹೋಗಿ, ಸ್ನೇಹಿತನನ್ನೇ ಶೂಟ್​ ಮಾಡಿ ಕೊಂದ..!

ದೆಹಲಿ: ಟಿಕ್​ಟಾಕ್.. ಆ್ಯಪ್​ ಯಾರಿಗೆ ಗೊತ್ತಿಲ್ಲಾ ಹೇಳಿ. ಟಿಕ್ ಟಾಕ್ ಮಾಡುವುದು ಇವತ್ತಿನ ಜನಮಾನದಲ್ಲಿ ಫ್ಯಾಶನ್ ಆಗಿಬಿಟ್ಟಿದೆ. ದೊಡ್ಡವರಿಂದ ಚಿಕ್ಕವರ ವರೆಗೆ ಎಲ್ಲರೂ ಟಿಕ್ ಟಾಕ್ ವಿಡಿಯೋ ಮಾಡುತ್ತಿದ್ದಾರೆ. ಮಕ್ಕಳು ಹಾಗೂ ಯುವ ಸಮೂಹಕ್ಕೆ ಈ ಟಿಕ್ ಟಾಕ್ ಒಂದು ರೀತಿಯ ಚಟವಾಗಿಬಿಟ್ಟಿದೆ. ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈಗಾಗ್ಲೆ ಹಲವು ರಾಜ್ಯಗಳು ಟಿಕ್​ ಟಾಕ್​ ಆ್ಯಪ್​ ಬಳಕೆಯನ್ನ ಬ್ಯಾನ್​ ಮಾಡಲು ನಿರ್ಧರಿಸಿವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕೂಡಾ ಟಿಕ್​ ಟಾಕ್​ ಬ್ಯಾನ್​ ಮಾಡುವಂತೆ ಕೋರ್ಟ್​ ಮೆಟ್ಟಿಲೇರಿದೆ. ಈಗ ಈ ಟಿಕ್​ಟಾಕ್​ ಆ್ಯಪ್​ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಅಂತೀರಾ..ಈ ಸ್ಟೋರಿ ಓದಿ..

ದೆಹಲಿಯಲ್ಲಿ ಟಿಕ್​ಟಾಕ್​ ವೀಡಿಯೊ ಮಾಡಲು ಹೋಗಿ ಯುವಕನೊಬ್ಬ ತನ್ನ 19 ವರ್ಷದ ಸ್ನೇಹಿತನನ್ನ ಶೂಟ್​ ಮಾಡಿ ಕೊಂದಿದ್ದಾನೆ. ನಿನ್ನೆ ಸಲ್ಮಾನ್​ ಎಂಬಯುವಕ ತನ್ನ ಸ್ನೇಹಿತರಾದ ಸೊಹೆಲ್ ಹಾಗೂ ಅಮೀರ್​ ಎಂಬುವರೊಂದಿಗೆ ಔಟಿಂಗ್​ ಹೋಗಿದ್ದ. ಮೂವರೂ ದೆಹಲಿಯ ಗೇಟ್​ ವೆ ಆಫ್​ ಇಂಡಿಯಾ ಬಳಿ ಫೋಟೊ ಶೂಟ್​ ಮಾಡಿಕೊಂಡು ವಾಪಸ್​ ಬರುತ್ತಿದ್ದರು. ಸಲ್ಮಾನ್​ ಕಾರು ಓಡಿಸುತ್ತಿದ್ದ.. ಈ ವೇಳೆ ಸೊಹೆಲ್​ ಜೇಬಿನಿಂದ ಸ್ವದೇಶಿ ಪಿಸ್ತೂಲ್​ ತೆಗೆದು  ಸಲ್ಮಾನ್​ ತಲೆಗೆ ಗುರಿ ಇಟ್ಟು ಟಿಕ್​ಟಾಕ್​ ವೀಡಿಯೋ ಮಾಡಲು ಮುಂದಾಗಿದ್ದಾನೆ. ಆದ್ರೆ ಅಚಾನಕ್​ ಆಗಿ ಪಿಸ್ತೂಲ್​ನಿಂದ ಫೈರ್​ ಆಗಿದೆ. ಡ್ರೈವ್​ ಮಾಡುತ್ತಿದ್ದ ಸಲ್ಮಾನ್ ಎಡ ಭಾಗದ ಕೆನ್ನೆಗೆ ಶೂಟ್​ ಆಗಿ ಛಿದ್ರ ಛಿದ್ರವಾಗಿದೆ. ಘಟನೆ ವೇಲೆ ಇನ್ನೊಬ್ಬ ಸ್ನೇಹಿತ ಅಮೀರ್​ ಹಿಂಬದಿ ಸೀಟ್​ನಲ್ಲಿ ಕುಳಿತಿದ್ದ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಸಲ್ಮಾನ್​ನನ್ನ ನೋಡಿ ಸೊಹೆಲ್​-ಅಮೀರ್​ ಭಯಗೊಂಡಿದ್ದಾರೆ. ತಕ್ಷಣ ಆತನ ರಕ್ತಸಿಕ್ತ ಬಟ್ಟೆ ಬದಲಾಯಿಸಿ ಸೊಹೆಲ್​ನ ಸಂಬಂಧಿಕರ ಮನೆಗೆ ಕರೆದೊಯ್ದಿದ್ದಾರೆ. ನಂತರ ಸಂಬಧಿಕರ ಸಹಾಯ ಪಡೆದು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಆ ವೇಳೆಗಾಗಲೇ ಸಲ್ಮಾನ್​ ಸಾವನ್ನಪ್ಪಿರುವುದನ್ನ ವೈದ್ಯರು ಖಚಿತ ಪಡಿಸಿದ್ರು. ಇನ್ನು ಹತ್ಯೆ ಹಾಗೂ ಹತ್ಯೆ ಸಹಾಯ ಮಾಡಿದ ಆರೋಪದ ಮೇಲೆ ಸೊಹೆಲ್​, ಅಮೀರ್​ ಹಾಗೂ ಶರಿಫ್​ನನ್ನ ಬರಖಂಬಾ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಉದ್ದೇಶ ಪೂರ್ವಕವಾಗಿ ನಡೆದಿದೆಯೇ ಅಥವಾ ಆಕಸ್ಮಿಕವಾಗಿ ನಡೆದಿದೆಯೇ ಎಂಬುದು ತನಿಖೆ ನಂತರವಷ್ಟೇ ಬಹಿರಂಗವಾಗಲಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv