ಐಪಿಎಲ್​-2019,​ ಆರ್​ಸಿಬಿಗೆ ಸತತ 6ನೇ ಸೋಲು

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಇಂದು ನಡೆದ ಪಂದ್ಯದಲ್ಲಿಯೂ ಆರ್​ಸಿಬಿ ಸೋಲುಂಡಿದೆ. ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 149ರನ್​ಗಳಿಸಿತ್ತು. 150 ರನ್​ಗಳನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 18.5 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 150 ರನ್​ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​ 67 ರನ್​ ಗಳಿಸಿ ತಂಡಕ್ಕೆ ಆಸರೆಯಾದ್ರು. ಆರ್​ಸಿಬಿ ಪರ ಸೌಥಿ ಹಾಗೂ ಚಾಹಲ್​ ತಲಾ 2 ವಿಕೆಟ್​ ಪಡೆದುಕೊಂಡ್ರು. ಈ ಪಂದ್ಯದ ಮೂಲಕ ಆರ್​ಸಿಬಿ ಸತತ 6ನೇ ಸೋಲು ಅನುಭವಿಸಿದೆ.