15 ವರ್ಷಗಳಿಂದ ರವಿ ಪೂಜಾರಿ ಸೆನೆಗಲ್ ಪ್ರಜೆ: ಭಾರತಕ್ಕೆ ಕರೆತರೋದು ಮತ್ತಷ್ಟು ವಿಳಂಬ..!

ಬೆಂಗಳೂರು: ಪಶ್ಚಿಮ ಆಫ್ರಿಕಾದ ಸೆನೆಗಲ್​ ದೇಶದಲ್ಲಿ ಸೆರೆಯಾಗಿರೋ ಭೂಗತ ಪಾತಕಿ ರವಿ ಪೂಜಾರಿಯನ್ನ ಭಾರತಕ್ಕೆ ಕರೆತರುವುದು ಮತ್ತಷ್ಟು ವಿಳಂಬವಾಗಲಿದೆ. ರವಿ ಪೂಜಾರಿ ಬರೋಬ್ಬರಿ 15 ವರ್ಷಗಳಿಂದ ಸೆನೆಗಲ್​ನ ಪ್ರಜೆಯಾಗಿರುವುದರಿಂದ ಭಾರತಕ್ಕೆ ಕರೆತರಲು ಕಷ್ಟವಾಗುತ್ತಿದೆ.
ಸೆನೆಗಲ್ ರಾಜಧಾನಿಯಲ್ಲಿ ಕಚೇರಿ ಹಾಗೂ ಮನೆ ಹೊಂದಿರುವ ರವಿ ಪೂಜಾರಿ, ಅಲ್ಲಿಯೂ ರಿಯಲ್‌ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ. ಅಲ್ಲಿಯೇ 15 ವರ್ಷದಿಂದ ಪೌರತ್ವ ಹೊಂದಿರುವುದಕ್ಕೆ ಕಾನೂನು ಹೋರಾಟದ ಅವಕಾಶವಿದೆ. ಹೀಗಾಗಿ ರವಿ ಪೂಜಾರಿಯನ್ನ ಭಾರತಕ್ಕೆ ಕರೆತರುವುದು ಮತ್ತಷ್ಟು ವಿಳಂಬವಾಗಲಿದೆ. ಸದ್ಯ ಕೇಂದ್ರ ಗೃಹ ಇಲಾಖೆ ರವಿ ಪೂಜಾರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನ ಫ್ರೆಂಚ್ ಭಾಷೆಗೆ ತರ್ಜುಮೆ ಮಾಡಿ ಡಕಾರ್​ನ ಭಾರತೀಯ ರಾಯಭಾರಿ ಕಚೇರಿಗೆ ತಲುಪಿಸಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv