ದೆಹಲಿಯ ವಯೋವೃದ್ಧ ಪ್ರೊಫೆಸರ್, ಕುಂದಗೋಳ ಕಂಡಕ್ಟರ್​​​ನ ಶ್ಲಾಘಿಸಿದ್ದು ಯಾಕೆ?​​​ ​​

ಹುಬ್ಬಳ್ಳಿ: ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕಳೆದುಕೊಂಡಿದ್ದ ನಿವೃತ್ತ ಪ್ರೊಫೆಸರ್​​​ಗೆ ಕೆಎಸ್​ಆರ್​ಟಿಸಿ ನಿರ್ವಾಹಕರೊಬ್ಬರು ಮರಳಿ ತಲುಪಿಸುವ ಮೂಲಕ ಪ್ರಮಾಣಿಕತೆ ಮೆರೆದಿದ್ದಾರೆ.
ಹುಬ್ಬಳ್ಳಿಯ ಗ್ರಾಮಾಂತರ ಘಟಕ-2 ರ ಬಸ್​​ ಕಂಡಕ್ಟರ್​​​ ಷರೀಫ್​​​​ ನದಾಫ್​​ ಪ್ರಮಾಣಿಕತೆ ಮೆರೆದಿದ್ದಾರೆ. ದೆಹಲಿಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರೊಪೆಸರ್​​ರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಡಾ. ಎಸ್​​. ವಿನೋದಾಬಾಯಿ ಬೆಂಗಳೂರಿನಿಂದ ಕುಂದಗೋಳಕ್ಕೆ ತೆರಳುತ್ತಿದ್ದರು. ಇನ್ನು ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ ಯರಗುಪ್ಪಿಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್​​ನಲ್ಲಿ ವಿನೋದಾಬಾಯಿಯವರು ಪ್ರಯಾಣಿಸಿದ್ದರು.
ಆದರೆ, ಕುಂದಗೋಳ ಬಸ್​​ ನಿಲ್ದಾಣದಲ್ಲಿ ವಿನೋದಾಬಾಯಿ ತಮ್ಮ ಬಳಿಯಿದ್ದ ಬ್ಯಾಗ್​​ ಮರೆತು ಕೆಳಗೆ ಇಳಿದಿದ್ದರು. ಬಸ್​​ ಚಲಿಸುತ್ತಿದ್ದ ಮಾರ್ಗಮಧ್ಯೆ ಕಂಡಕ್ಟರ್​​ ಬ್ಯಾಗ್​​ ನೋಡಿ ತಮ್ಮ ಬಳಿ ತೆಗೆದು ಇಟ್ಟುಕೊಂಡಿದ್ದರು. ಇನ್ನು ಕುಂದಗೋಳದಲ್ಲಿ ಅವರ ಸಂಬಂಧಿಕರು ಬಸ್​​ ನಿಲ್ದಾಣ ಬಳಿ ವಿನೋದಾಬಿಯಿ ಅವರ ಬಳಿ ಮೊಬೈಲ್​ ಮತ್ತು ಬ್ಯಾಗ್​​ ಇಲ್ಲದ್ದನ್ನು ಗಮನಿಸಿದ್ದಾರೆ. ಬಳಿಕ, ಪ್ರೊಫೆಸರ್ ಅವರ ಸಂಬಂಧಿಕರು ಕಂಡಕ್ಟರ್​​ ಷರೀಫ್​​​​​ಗೆ ಮೊಬೈಲ್​​ ಮೂಲಕ ಸಂಪರ್ಕಿಸಿ ಬಸ್​ನಲ್ಲಿ ವಿನೋದಾ ಬಾಯಿಯವರು ಬ್ಯಾಗ್​ ಮರೆತು ಇಳಿದಿದ್ದಾರೆ. ಅದರಲ್ಲಿ ₹40 ಸಾವಿರ ನಗದು, ಒಂದು ಮೊಬೈಲ್​​​, ಆಸ್ತಿಗೆ ಸಂಬಂಧಿಸಿದ ಕೆಲವು ಮಹತ್ವದ ದಾಖಲೆಗಳು ಇವೆ ಎಂದು ತಿಳಿಸಿದ್ದಾರೆ. ಬ್ಯಾಗ್​ನಲ್ಲಿ ಏನಿದೆ ಎಂದು ನೋಡದೇ ಸುಮ್ಮನೆ ಕಂಡಕ್ಟರ್​​​​ ಇಟ್ಟುಕೊಂಡಿದ್ದರು. ಕರೆ ಬಂದ ಬಳಿಕ ಬ್ಯಾಗ್​ನಲ್ಲಿ ನೋಡಿ ವಾಪಸ್ಸು ಬರುವ ವೇಳೆ ನೀಡುತ್ತೇನೆ ಎಂದು ಕಂಡಕ್ಟರ್​​ ಹೇಳಿದ್ದಾರೆ. ಇನ್ನು ಯರಗುಪ್ಪಿಯಿಂದ ಹುಬ್ಬಳ್ಳಿಗೆ ಬಸ್​​ ವಾಪಸ್ಸು ಬರುವ ವೇಳೆ ಕುಂದಗೋಳದಲ್ಲಿ ಪ್ರೊಫೆಸರ್ ವಿನೋದಾಬಾಯಿಯವರಿಗೆ ಕಂಡಕ್ಟರ್ ಬ್ಯಾಗ್​​ ನೀಡಿದ್ದಾರೆ. ಬ್ಯಾಗ್​ನಲ್ಲಿದ್ದ ಎಲ್ಲಾ ವಸ್ತುಗಳು ಸೇರಿದಂತೆ ನಗದು ಇರುವುದನ್ನು ಕಂಡು ಖುಷಿಯಾದ, ಪ್ರೊಫೆಸರ್ ಷರೀಫ್​​ ಕಾರ್ಯವನ್ನು ಶ್ಲಾಘಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv