ರಾಹುಲ್ ಗಾಂಧಿ ಮಾಸ್ಟರ್​​ ಡಿಗ್ರಿ ಇಲ್ದೆ ಎಂ.ಫಿಲ್​​ ಪಡೆದಿದ್ದಾರೆ: ಜೇಟ್ಲಿ ತಿರುಗೇಟು

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೋಕಸಭಾ ಚುನಾವಣೆಯ ನಾಮಪತ್ರದಲ್ಲಿ ತಮ್ಮ ವಿದ್ಯಾರ್ಹತೆ ಬಗ್ಗೆ ಸುಳ್ಳು ಹೇಳಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಅರುಣ್​​ ಜೇಟ್ಲಿ ಸಮರ್ಥನೆ ನೀಡಿದ್ದಾರೆ. ಸ್ಮೃತಿ ಇರಾನಿ ತಮ್ಮ ವಿದ್ಯಾರ್ಹತೆ ಬಗ್ಗೆ ಚುನಾವಣಾ ಆಯೋಗಕ್ಕೆ ವ್ಯತಿರಿಕ್ತವಾದ ಅಫಿಡವಿಟ್​​ಗಳನ್ನ ನೀಡಿದ್ದಾರೆ ಎಂದು ಕಾಂಗ್ರೆಸ್​​ ಆರೋಪ ಮಾಡಿದೆ. ಈ ಹಿನ್ನೆಲೆ ತಮ್ಮ ಬ್ಲಾಗ್​​​ನಲ್ಲಿ ಕಾಂಗ್ರೆಸ್​ಗೆ ತಿರುಗೇಟು ನೀಡಿರೋ ಜೇಟ್ಲಿ, ನಿಮ್ಮ ಗಮನವೆಲ್ಲಾ ಬಿಜೆಪಿ ಅಭ್ಯರ್ಥಿಯ ವಿದ್ಯಾರ್ಹತೆ ಬಗ್ಗೆ ಇದೆ. ಆದ್ರೆ ನಿಮ್ಮ ಪಕ್ಷದ ಮುಖ್ಯಸ್ಥ ರಾಹುಲ್​​ ಗಾಂಧಿ ಅವರ ಶೈಕ್ಷಣಿಕ ಹಿನ್ನೆಲೆ ಬಗ್ಗೆಯೇ ಉತ್ತರಿಸೋದು ತುಂಬಾ. ರಾಹುಲ್ ಗಾಂಧಿ ಮಾಸ್ಟರ್​ ಡಿಗ್ರಿ ಇಲ್ಲದೆಯೇ ಎಂ.ಫಿಲ್​​​​​ ಪಡೆದಿದ್ದಾರೆ ಎಂದು ಹೇಳಿದ್ದಾರೆ.

Posted by Arun Jaitley on Friday, April 12, 2019

ಇದನ್ನೂ ಓದಿ: ಸಚಿವೆ ಸ್ಮೃತಿ ಇರಾನಿ ಡಿಗ್ರಿ ಮಾಡಿಯೇ ಇಲ್ಲ..! 

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv