ಈ ಪಬ್ಲಿಕ್ ರೋಡಿನಲ್ಲಿ ಜಿಂಕೆ ಬಂದೈತಲ್ಲೋ..

ರಾಮನಗರ: ಕಾಡಿನಲ್ಲಿರಬೇಕಾದ ಜಿಂಕೆಮರಿಗೆ ಬಹುಶ ನಗರ ಸುತ್ತೋ ಮನಸ್ಸಾಯಿತೋ ಏನೋ? ಸೀದಾ ಸೀದಾ ಕನಕಪುರ ನಗರದೊಳಗೆ ಪ್ರವೇಶಿಸಿಬಿಟ್ಟಿತ್ತು. ಆದ್ರೆ ನಗರಕ್ಕೆ ಬಂದ ಜಿಂಕೆಗೆ ಮತ್ತೆ ಕಾಡಿಗೆ ಹೋಗಲು ದಾರಿ ಸಿಗದೇ ಗಾಬರಿಯಿಂದ ಅತ್ತಿತ್ತ ಓಡಾಡತೊಡಗಿತು.
ಪಬ್ಲಿಕ್‌ನಲ್ಲಿ ಓಡಾಡುತ್ತಿದ್ದ ಜಿಂಕೆಯನ್ನು ಕಂಡ ಜನ ಕೂಡಾ ದಂಗಾದರು. ಈ ನಗರದ ಗಲಾಟೆ ನೋಡಿ ಗಾಬರಿಯಾದ ಜಿಂಕೆ, ಕಡೆಗೆ ಹೇಗೋ ತಪ್ಪಿಸಿಕೊಂಡು ಹೋದರೆ ಸಾಕು ಅಂತಾ ಪಾರ್ಕ್‌ನ ಬೇಲಿ ಹಾರಲು ಹೋಗಿದೆ. ಆದ್ರೆ ಅಲ್ಲೂ ತಂತಿಗೆ ಸಿಕ್ಕಾಕಿಕೊಂಡು ತನ್ನ ಕೊಂಬು ಮುರಿದುಕೊಂಡಿದೆ. ಈ ನಡುವೆ ಸಾರ್ವಜನಿಕರು ರಕ್ಷಣೆಗೆ ಧಾವಿಸಿದ್ದು, ಪಟ್ಟಣದ ಬಸವೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿ ಇರುವ ಉದ್ಯಾನದ ತಂತಿಗೆ ಜಿಂಕೆ ಸಿಲುಕಿದ್ದ, ಜಿಂಕೆಯನ್ನು ರಕ್ಷಣೆ ಮಾಡಿ‌ ಅರಣ್ಯ ಇಲಾಖೆಗೆ ಒಪ್ಪಿಸಿದರು.
ಉದ್ಯಾನದ ತಂತಿಗೆ ಸಿಲುಕಿ ಕೋಡು ಮುರಿದುಕೊಂಡ ಜಿಂಕೆಗೆ ಇದೀಗ ಆರೈಕೆ‌ ಮಾಡಲಾಗುತ್ತಿದೆ. ಇನ್ನೆರೆಡು ದಿನಗಳ ಕಾಲ ಔಷಧೋಪಚಾರ ನೀಡಿ ನಂತರ ಕಾಡಿಗೆ ಬಿಡಲಾಗುವುದು ಅಂತಾ ಅರಣ್ಯ ಇಲಾಖಾಧಿಕಾರಿ ಆರ್​ಎಫ್ಓ ದಿನೇಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *