ಶಾಲಾ ಬಾಲಕಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ

ಮಂಬೈ: ಎರಡು ವರ್ಷಗಳ ಗ್ಯಾಪ್ ಬಳಿಕ ಶೂಟಿಂಗ್​ ಸೆಟ್​ಗೆ ಕಮ್​ಬ್ಯಾಕ್​ ಮಾಡಿರುವ ಗುಳಿ ಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಇದೀಗ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪದ್ಮಾವತ್‌ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಡಿಪ್ಪಿ ಇದೀಗ, ಮೇಘನಾ ಗುಲ್ಜಾರ್ ಅವರ ನಿರ್ದೇಶನದ ‘ಚಪಾಕ್’ ಸಿನಿಮಾದ ಶೂಟಿಂಗ್‌ನಲ್ಲಿ ಶಾಲಾ ವಿದ್ಯಾರ್ಥಿನಿಯ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾಲಾ ಹುಡುಗಿಯಂತೆ ಯೂನಿಫಾರ್ಮ್ ತೊಟ್ಟು ಬ್ಯಾಗ್ ಹಾಕಿ ದೀಪಿಕಾ ರಸ್ತೆ ಪಕ್ಕದಲ್ಲಿ ನಿಂತು, ಸ್ಟ್ರೀಟ್​ ಫುಡ್​ ಸವಿಯುತ್ತಿರುವ ವಿಡಿಯೋವೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡ್ತಿದೆ. ಡಿಪ್ಪಿಯ ಹೊಸ ಲುಕ್​ಗೆ ಸಾಮಾಜಿಕ ಜಾಲತಾಣದ ಮಂದಿ ಫಿದಾ ಆಗಿದ್ದಾರೆ.

ಆ್ಯಸಿಡ್ ದಾಳಿಗೆ ಒಳಗಾಗಿ ಬದುಕುಳಿದ ಯುವತಿ ಲಕ್ಷ್ಮೀ ಅಗರ್ವಾಲ್ ಅವರ ನಿಜ ಜೀವನದ ಕಥೆಯನ್ನು ಸಿನಿಮಾ ಮಾಡಲಾಗ್ತಿದೆ. ದೀಪಿಕಾ ಪಡುಕೋಣೆ ಇತ್ತೀಚೆಗೆ ಚಿತ್ರದ ಫಸ್ಟ್​ ಪೋಸ್ಟರ್​ನಲ್ಲಿ ಆ್ಯಸಿಡ್​ ದಾಳಿ ಸಂತ್ರಸ್ತೆಯ ಪಾತ್ರದಲ್ಲಿ ಜನರ ಮನ ಗೆದ್ದಿದ್ರು. ಈ ಸಿನಿಮಾ 2020 ಜನವರಿ 10 ರಿಲೀಸ್​ ಆಗಲಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv