ನಟಿ ದೀಪಿಕಾ ಪಡುಕೋಣೆ ವಾಸವಿದ್ದ ಕಟ್ಟಡ ಧಗಧಗ..!

ಮುಂಬೈ: ಬಾಲಿವುಡ್​​ ನಟಿ ದೀಪಿಕಾ ಪಡುಕೊಣೆ ವಾಸವಿದ್ದ ಕಟ್ಟಡದಲ್ಲಿ ಅಗ್ನಿಅವಘಡ ಸಂಭವಿಸಿದೆ. ಆದ್ರೆ ನಟಿ ದೀಪಿಕಾ ಪಡುಕೊಣೆ ಶೂಟಿಂಗ್​​ಗೆ ತೆರಳಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ವೊರ್ಲಿಯಲ್ಲಿರುವ ಬಿವುಮಾಂಡೆ ಕಟ್ಟಡದ ಬಿ ವಿಭಾಗದ ಅಪಾರ್ಟ್​ಮೆಂಟ್​​ ಒಂದರಲ್ಲಿ ಬೆಂಕಿಕಾಣಿಸಿಕೊಂಡಿದೆ. ಮೊದಲಿಗೆ ಕಟ್ಟಡದ 33ನೇ ಅಂತಸ್ತಿನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ನಂತ್ರ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಇದರಿಂದ ಗಾಬರಿಗೊಂಡ ಕಟ್ಟಡದ ನಿವಾಸಿಗಳು ಜೋರಾಗಿ ಕೂಗಿಕೊಂಡಿದ್ದಾರೆ.

ಇದೇ ಅಪಾರ್ಟ್​ಮೆಂಟ್​​ನಲ್ಲಿ ಬಾಲಿವುಡ್​ ನಟಿ ಹಾಗೂ ಕನ್ನಡತಿ ದೀಪಿಕಾ ಪಡುಕೊಣೆ 26ನೇ ಅಂತಸ್ತಿನಲ್ಲಿ ವಾಸವಿದ್ದರು. ಆದ್ರೆ ದೀಪಿಕಾ ಪಡುಕೊಣೆ ಅಪಾರ್ಟ್​ಮೆಂಟ್​​ನಲ್ಲಿ ಇರಲಿಲ್ಲ. ಶೂಟಿಂಗ್​ಗೆ ತೆರಳಿದ್ದರು ಎನ್ನಲಾಗಿದೆ. ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಇನ್ನು ಕಟ್ಟಡದಲ್ಲಿ ನೂರಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾದ ವರದಿ ಆಗಿಲ್ಲ.

ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ಬಾಲಿವುಡ್​​ ನಟಿ ದೀಪಿಕಾ ಪಡುಕೋಣೆ, ಘಟನೆ ಬಗ್ಗೆ ಟ್ವೀಟ್​​ ಮಾಡಿದ್ದು, ನನಗೆ ಯಾವುದೇ ತೊಂದರೆಯಿಲ್ಲ, ಐ ಆ್ಯಮ್​ ಸೇಫ್​ ಅಂತಾ ಟ್ವೀಟ್​​ ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv