ಜಾಮೀನಿಗೆ ಅರ್ಜಿ ಸಲ್ಲಿಸಿದ ದೀಪಕ್ ತಲ್ವಾರ್

ನವದೆಹಲಿ : ಅಗಸ್ಟಾ ವೆಸ್ಟ್​ಲ್ಯಾಂಡ್ ಪ್ರಕರಣದ ಮಧ್ಯವರ್ತಿ, ದೀಪಕ್ ತಲ್ವಾರ್ ತನಗೆ ಜಾಮೀನು ನೀಡಬೇಕು ಅಂತ ಕೋರಿ ದೆಹಲಿಯ ಸಿಬಿಐ ವಿಶೇಷ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾನೆ. ದುಬಯನಲ್ಲಿ ತಲೆಮರೆಸಿಕೊಂಡಿದ್ದ ತಲ್ವಾರ್​ನನ್ನ ಜನವರಿ 30ರಂದು ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು.
ವಿವಿಐಪಿ ಚಾಪರ್ ಹಗರಣದಲ್ಲಿ ಆರೋಪಿಯಾಗಿರುವ ದೀಪಕ್ ತಲ್ವಾರ್, ಆರ್ಥಿಕ ಅಪರಾಧಿ, ಉದ್ಯಮಿ ವಿಜಯ್ ಮಲ್ಯ ಜೊತೆಗೂ ಸಂಬಂಧಗಳನ್ನ ಹೊಂದಿದ್ದ ಅಂತ ಜಾರಿ ನಿರ್ದೇಶನಾಲಯ ಹೇಳಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆಂದು ದೀಪಕ್ ತಲ್ವಾರ್​ನನ್ನ ಫೆಬ್ರವರಿ 12ರವರೆಗೆ ಕಸ್ಟಡಿಗೆ ನೀಡಿ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಆದೇಶಿಸಿತ್ತು.
ಕಾರ್ಪೊರೇಟ್ ಲಾಬಿಯಲ್ಲಿ ದೀಪಕ್ ತಲ್ವಾರ್ ತೊಡಗಿಸಿಕೊಂಡಿದ್ದ. ಸುಮಾರು 90 ಕೋಟಿ ರೂಪಾಯಿಯ ಅಕ್ರಮ ವೆಸಗಿದ್ದಾನೆ ಅಂತ ಜಾರಿ ನಿರ್ದೇಶನಾಲಯ ಆರೋಪಿಸಿದೆ. ಸದ್ಯ ತಲ್ವಾರ್ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗುತ್ತಿದ್ದು, ತನಗೆ ಬೇಲ್ ನೀಡಬೇಕು ಅಂತ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದಾನೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv