ಬೆಳೆ ಬಾರದೆ ಚಿಂತೆ, ಸಾಲಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ದಾವಣಗೆರೆ: ಸಾಲ ಬಾಧೆಗೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕು ಯಲೋದಹಳ್ಳಿಯಲ್ಲಿ ನಡೆದಿದೆ. ಶಾಂತಪ್ಪ(68) ಆತ್ಮಹತ್ಯೆ ಮಾಡಿಕೊಂಡ ರೈತ. 5.5 ಎಕರೆ ಜಮೀನು ಹೊಂದಿದ್ದ ಮೃತ ರೈತ ಶಾಂತಪ್ಪ, ಕೃಷಿಗಾಗಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಸೇರಿದಂತೆ ವಿವಿಧೆಡೆ ₹ 6.50 ಲಕ್ಷ ಸಾಲ ಮಾಡಿಕೊಂಡಿದ್ದರು. ಆದರೆ, ಬಿತ್ತಿದ್ದ ಬೆಳೆ ಸರಿಯಾಗಿ ಬರದಿದ್ದರಿಂದ ಚಿಂತೆಗೀಡಾಗಿದ್ದರು. ಹೀಗಾಗಿ 3 ದಿನಗಳ ಹಿಂದೆಯೇ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಅವರ ಶವ ಪತ್ತೆಯಾಗಿದೆ.  ಈ ಸಂಬಂಧ ಬಸವಾಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv