ಸಿಂಹಗಳ ಸರಣಿ ಸಾವು, ಕಾರಣ..?

ಅಹಮದಾಬಾದ್​: ಅಹಮದಾಬಾದ್‌ನ ಗಿರ್ ಅರಣ್ಯ ಪ್ರದೇಶದಿಂದ ಸಂರಕ್ಷಣಾ ಪ್ರದೇಶಕ್ಕೆ ಸ್ಥಳಾಂತರಿಸಲ್ಪಟ್ಟಿದ್ದ 2 ಸಿಂಹಗಳು ಸಾವನ್ನಪ್ಪಿವೆ. ಆ ಮೂಲಕ ಗಿರ್ ಅರಣ್ಯ ಪ್ರದೇಶದಲ್ಲಿ ಸೋಂಕಿನಿಂದ ಸಾವಿಗೀಡಾದ ಸಿಂಹಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಈ ಪೈಕಿ 11 ಸಿಂಹಗಳು ಕಾದಾಟದಲ್ಲಿ ಹಾಗೂ ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿತ್ತು. ಸಿಂಹಗಳ ಸರಣಿ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿರೋ ಗುಜರಾತ್ ಸಿಎಂ ವಿಜಯ್ ರೂಪಾನಿ ಸೋಂಕಿನಿಂದಾಗಿ ಇಷ್ಟೊಂದು ಪ್ರಮಾಣದಲ್ಲಿ ಸಿಂಹಗಳು ಸಾವಿಗೀಡಾಗುತ್ತಿರೋದು ದುರಾದೃಷ್ಟಕರ ಘಟನೆ ಎಂದಿದ್ದಾರೆ. ದೆಹಲಿ ಹಾಗೂ ಪುಣೆಯಿಂದ ತಜ್ಞ ವೈದ್ಯರನ್ನು ಕರೆಸಿ ಸಿಂಹಗಳ ಆರೋಗ್ಯ ತಪಾಸಣೆ ಹಾಗೂ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಲಾಗಿದೆ ಎಂದು ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv