ಆಹಾರ ಅರಸಿ ಊರೊಳಗೆ ಬಂದ ಜಿಂಕೆ

ಹೊಸಕೋಟೆ: ಕಾಡಿನ ಪ್ರಾಣಿಗಳು ಊರೊಳಗೆ ಕಾಣಿಸಿಕೊಳ್ಳೋದು ಸಾಮಾನ್ಯವಾಗಿದೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಬನಹಳ್ಳಿ ಗ್ರಾಮದಲ್ಲಿ ಜಿಂಕೆಯೊಂದು ಪ್ರತ್ಯಕ್ಷವಾಗಿತ್ತು.  ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕು ನಂದಗುಡಿ ಹೋಬಳಿ ಬನಹಳ್ಳಿ ಗ್ರಾಮದಲ್ಲಿ ಆಹಾರ ಅರಸಿ ಊರೊಳಗೆ ಕಾಣಿಸಿಕೊಂಡಿತ್ತು. ಗ್ರಾಮದೊಳಗೆ ಬಂದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.