ನೀರು ಪಾಲಾದ ಯುವಕನ ಮೃತ ದೇಹ ಪತ್ತೆ

ನೆಲಮಂಗಲ: ಕಳೆದ ಭಾನುವಾರ ಸ್ನೇಹಿತರೊಡನೆ ಲಕ್ಷ್ಮಿಪುರ ಗ್ರಾಮದ ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.

ಪೀಣ್ಯದ ತಿಗರಪಾಳ್ಯ ಗ್ರಾಮದ ನಿವಾಸಿ ಪ್ರಜ್ವಲ್​ (15) ಮೃತ ಯುವಕನಾಗಿದ್ದು, ಈತನ ಮೃತ ದೇಹಕ್ಕಾಗಿ ಕಳೆದ ಎರಡು ದಿನಗಳಿಂದ ಶೋಧ ನಡೆಸಲಾಗ್ತಿತ್ತು. ಅಗ್ನಿಶಾಮಕ ಸಿಬ್ಬಂದಿ ಕಡೆಗೂ ದೇಹವನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೆರೆಯಿಂದ ಮೃತ ದೇಹ ಹೊರ ತೆಗೆಯುತ್ತಿದ್ದಂತೆಯೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶವಪರೀಕ್ಷೆಗಾಗಿ ಮೃತ ದೇಹವನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮಾದನಾಯಕನಹಳ್ಳಿ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *