ಟೀಂ ಇಂಡಿಯಾ ಮಾಜಿ ಬೌಲರ್​ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ..!

ಟೀಂ ಇಂಡಿಯಾದ ಮಾಜಿ ಪೇಸ್​ ಬೌಲರ್, ಹಾಗೂ ಡಿಡಿಸಿಎ (ದೆಹಲಿ ಡಿಸ್ಟ್ರಿಕ್ಟ್​ ಕ್ರಿಕೆಟ್​ ಅಸ್ಸೋಸಿಎಷನ್)​ ಸೀನಿಯರ್​ ಸೆಲೆಕ್ಷನ್​ ಕಮಿಟಿ ಚೇರ್​ಮನ್​ ಅಮಿತ್ ಭಂಡಾರಿ ಮೇಲೆ ದುಷ್ಕರ್ಮಿಗಳ ಗುಂಪು ಗಂಭೀರ ಹಲ್ಲೆ ನಡೆಸಿದೆ. ನಗರದ ಸೇಂಟ್​​ ಸ್ಟಿಫನ್​ ಗ್ರೌಂಡ್​ನಲ್ಲಿ ಇಂದು ಬೆಳಗ್ಗೆ ಅಂಡರ್​ 23 ಕ್ರಿಕೆಟ್​ ಟೀಂ ಟ್ರಯಲ್​ ನಡೆಯುತ್ತಿತ್ತು. ಈ ವೇಳೆ ಮೈದಾನಕ್ಕೆ ಆಗಮಿಸಿದ ಅಪರಿಚಿತ ಕಿಡಿಗೇಡಿಗಳ ಗುಂಪು ಅಮಿತ್​ ಭಂಡಾರಿ ಮೇಲೆ ಗಂಭೀರ ಹಲ್ಲೆ ನಡೆಸಿದೆ. ಪರಿಣಾಮ ಅವರ ತಲೆ ಹಾಗೂ ಕಿವಿಗೆ ಗಂಭೀರ ಗಾಯಗಳಾಗಿದ್ದು ಅಮಿತ್​ ಭಂಡಾರಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೆಹಲಿ ಅಂಡರ್​ 23 ಕ್ರಿಕಟ್ ಮ್ಯಾನೇಜರ್​ ಶಂಕರ್​ ಶೈನಿ ಹೇಳುವಂತೆ ಅಮಿತ್​ ಭಂಡಾರಿ ಮೈದಾನದ ಹೊರಗೆ ಸಹೋದ್ಯೋಗಿಗಳ ಜೊತೆ ಊಟ ಮಾಡುತ್ತಿದ್ದ ವೇಳೆ ಕೆಲ ಯುವಕರ ಗುಂಪು ಬಂದು ಮಾತಿನ ಚಕಮಕಿ ನಡೆಸುತ್ತಿತ್ತು. ಅಲ್ಲೇನು ನಡೆಯುತ್ತಿದೆ ಎಂದು ತಿಳಿಯುವ ಹೊತ್ತಿಗೆ ಸುಮಾರು 15 ಜನರ ಗುಂಪು ಕೈಯಲ್ಲಿ ಹಾಕಿ ಸ್ಟಿಕ್​, ಕಬ್ಬಿಣದ ರಾಡ್​ಗಳು ಹಾಗೂ ಸೈಕಲ್​ ಚೈನ್​ಗಳನ್ನ ಹಿಡಿದು ಬಂದಿತು. ನೋಡನೋಡುತ್ತಿದ್ದಂತೆಯೇ ಅಮಿತ್​ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ರು. ಅಲ್ಲೇ ಇದ್ದ ನಾವು ಅವರನ್ನ ಬಿಡಿಸಿಕೊಳ್ಳಲು ಮುಂದಾದೆವು ಆದ್ರೆ ನಮಗೆ ಗನ್​ ತೋರಿಸಿ ಶೂಟ್​ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿ ಮಾರಣಾಂತಿಕ ಹಲ್ಲೆ ನಡೆಸಿ ಹೊರಟು ಹೋದರು. ಕೃತ್ಯದ ಹಿಂದೆ ಯಾರ ಕೈವಾಡವಿದೆ ಎಂದು ಗೊತ್ತಿಲ್ಲ ಅಂತಾ ತಿಳಿಸಿದ್ರು. ಆದ್ರೆ ಪ್ರಾಥಮಿಕ ತನಿಖೆಯಿಂದ ಇದು ಅಂಡರ್​ 19 ಟೀಂ ಸೆಲೆಕ್ಷನ್​ ವಿಚಾರವಾಗಿ ನಡೆದಿದೆ ಎಂದು ಹೇಳಲಾಗುತ್ತಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv