ಮದುವೆಯಾಗೋಕೆ ಹೋಗ್ಬೇಡ, ಜಾಸ್ತಿ ದಿನ ಉಳಿಯೋಲ್ಲ ಅಂತಾ ರೌಡಿಗಳಿಗೆ ಪೊಲೀಸರ ಖಡಕ್ ವಾರ್ನಿಂಗ್​

ಬೆಂಗಳೂರು:  ಇಂದು ಡಿಸಿಪಿ ಗಿರೀಶ್ ಅವರು ರೌಡಿ ಶೀಟರ್​ಗಳಾದ ಸೈಲೆಂಟ್ ಸುನೀಲ ಹಾಗೂ ಕುಣಿಗಲ್ ಗಿರಿ ಸೇರದಂತೆ ಹಲವರಿಗೆ ಮಾತಿನಲ್ಲೆ  ಬೆಂಡೆತ್ತಿದ್ದಾರೆ. ನಗರದ ಪೊಲೀಸ್​ ಆಯುಕ್ತರ ಕಚೇರಿಯಲ್ಲಿ ರೌಡಿಗಳ ಪರೇಡ್​ ನಡೆಸಿದ ವೇಳೆ, ಸೈಲೆಂಟ್ ಸುನೀಲ ಹಾಗೂ ಕುಣಿಗಲ್ ಗಿರಿ ಹಾಜರಿದ್ದರು. ಆಗ ಡಿಸಿಪಿ ಗಿರೀಶ್, ಕುಣಿಗಲ್ ಗಿರಿಯನ್ನ ವಿಚಾರಣೆ ನಡೆಸಿ, ಏನು ಫೇಮಸ್ ಆಗೋಕೆ ಹೊರಟಿದ್ಯ?!.. ಮದುವೆ ಆಗಿದ್ಯ ನಿಂಗೆ ಎಂದು ಕೇಳಿದರು. ಆಗ ಇಲ್ಲ ಸರ್ ಮದುವೆ ಆಗಿಲ್ಲ. ಈಗ ಹುಡುಗೀನ ಹುಡುಕ್ತಿದ್ದಾರೆ 31 ವಯಸ್ಸು ಎಂದ. ಹಾಗಿದ್ರೆ ಮದುವೆಯಾಗೋಕೆ ಹೋಗ್ಬೇಡ. ಜಾಸ್ತಿ ದಿನ ಉಳಿಯೋಲ್ಲ ನೀನು. ನಿನ್ನ ಆಟಗಳು ಗೊತ್ತಿಲ್ಲ ಅಂತ ಅರಾಮಾಗಿದ್ಯ?!.ನಿನ್ನ ಕಳ್ಳಾಟಗಳು ಎಲ್ಲವೂ ಗೊತ್ತಿದೆ. ಇದೆ ನಿಂಗೆ ಮುಂದೆ ಪರೇಡ್ ಮುಗಿದ್ಮೇಲೆ ನೀನಿರು ಅಂತಾ ಕುಣಿಗಲ್ ಗಿರಿಗೆ ಖಡಕ್​ ವಾರ್ನಿಂಗ್​ ಕೊಟ್ಟರು.

ಇದೆ ವೇಳೆ ಪರೇಡ್​ನಲ್ಲಿ ಹಾಜರಿದ್ದ ಸೈಲೆಂಟ್ ಸುನೀಲನನ್ನ ವಿಚಾರಿಸಿದ ಡಿಸಿಪಿ‌ ಗಿರೀಶ್ ನೋಡೋಕೆ ಚೆನ್ನಾಗಿದೀಯ, ನಮ್ದೆ ಹವಾ ಅನ್ಕೊಬೇಡ. ಮೊದಲಿನ ಥರ ಅಲ್ಲ ಪೊಲೀಸ್ ಆಫೀಸರ್ಸ್, ಬಾಲ ಬಿಚ್ಚಿದ್ರೆ ಬೆಂಡೆತ್ಬಿಡ್ತೀವಿ. ಎಲ್ಲಿ ಮನೆ‌ ನಿಂದು ಎಂದರು. ಇದಕ್ಕೆ ಸೈಲೆಂಟ್ ಸುನೀಲ ಪ್ರತಿಕ್ರಿಯಿಸಿ, ಸಹಕಾರ ನಗರ ಸರ್ ಎಂದ. ಸಹಕಾರನಗರದಲ್ಲಿ ಎಲ್ಲಿ ?! ಇಲ್ಲಿಗೆ ನಿಲ್ಲಿಸ್ಬಿಡು ನೀನು ಎಲ್ಲಾ. ನೀನು‌ ಜಾಸ್ತಿ ದಿನ ಬದುಕೋಲ್ಲ ಹುಷಾರಾಗಿರು ಅಂತಾ ಎಚ್ಚರಿಸಿದರು.  

ಇದೆ ವೇಳೆ ಹೆಚ್ಚುವರಿ ಪೊಲೀಸ್​ ಆಯಕ್ತ ಅಲೋಕ್ ಕುಮಾರ್ ಪರೇಡ್​ನಲ್ಲಿ ಹಾಜರಿದ್ದ, ಒರ್ವ ಆರೋಪಿಯನ್ನ  ವಿಚಾರಿಸಿ,  ನೀವೆಲ್ಲಾ ಹೇರ್ ಕಟ್ ಮಾಡದೆ ಹಂದಿಗಳ ರೀತಿ ಇರಕೂಡದು. ಹೇರ್ ಕಟ್ ಮಾಡಿ ಫೋಟೋ ಕಳಿಸಬೇಕು. ಇಲ್ಲ ಅಂದ್ರೆ ಬೆಂಡೆತ್ತುತ್ತೇವೆ, ನೀನು ಏನು ಅರ್ಧ ಕೊಲೆ ಮಾಡಿದ್ಯಾ. ಎಷ್ಟಿದೆ ನಿನ್ನ‌ಮೇಲೆ ಕೇಸ್, ಯಾಕೆ ಫುಲ್ ಮರ್ಡರ್ ಮಾಡಿಲ್ಲ. ತಲೆ‌ ಎತ್ತಿ ನನ್ನ‌ ನೋಡಿ ಮಾತಾಡು. ಯಾಕೆ ಸುಮ್ಮನಿದ್ದಿಯಾ ಹೇಳು ಯಾಕೆ ಸರಿಯಾಗಿ ಹೊಡಿಲಿಲ್ವ.! ಶಕ್ತಿ‌ ಇಲ್ವ ನಿಂಗೆ ಏನ್ ಕಾಮಿಡಿ ಮಾಡ್ತಿದ್ದೀನಾ ನಿಂಗೆ‌.. ಇನ್ನು ಮುಂದೆ ನಿನ್ನ ಮೇಲೆ ಒಂದೇ ಒಂದು ಕೇಸ್ ಬಿದ್ರೆ, ಜೀವಂತ ಉಳಿಯಲ್ಲ..ಅಂತಾ ಹಾಫ್ ಮರ್ಡರ್ ಕೇಸ್ ಭಾಗಿಯಾಗಿದ್ದವನಿಗೆ ಅಲೋಕ್ ಕುಮಾರ ಚಳಿ ಬಿಡಿಸಿದರು.


 

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv