ಇಂದಿರಾ ಕ್ಯಾಂಟೀನ್​ಗೆ ಪರಮೇಶ್ವರ್ ಕೊಕ್ಕೆ? ಹೀಗ್ಯಾಕೆ ಮಾಡಿದ್ರು ಡಿಸಿಎಂ?

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್​​​​​ಗೆ ಕಾಂಗ್ರೆಸ್​​​ನವರೇ ಆದ ಡಿಸಿಎಂ ಪರಮೇಶ್ವರ್ ಕೊಕ್ಕೆ ಹಾಕಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರಿಂದಾಗಿ ನಗರೋತ್ಥಾನ ಯೋಜನೆಯಡಿ ಹಣ ಬಿಡುಗಡೆ ಆಗುತ್ತೆ ಅಂತಾ ನಂಬಿಕೊಂಡು ಸ್ವಂತ ಹಣ ಹಾಕಿ ಕೆಲಸ ಮಾಡಿದ್ದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಿಬಿಎಂಪಿ ಮೇಯರ್ ಹಾಗೂ ಇಂಜಿನೀಯರ್​ಗಳ​​ ಮೌಖಿಕ ಆದೇಶ ನೆಚ್ಚಿಕೊಂಡು ಬರೋಬ್ಬರಿ ₹ 35 ಕೋಟಿ ಹಣವನ್ನು ಗುತ್ತಿಗೆದಾರರು 198 ಇಂದಿರಾ ಕ್ಯಾಂಟೀನ್ ರಕ್ಷಣೆ ಹಾಗೂ ಹೊರಗಡೆ ಡಿಸೈನ್​ಗಾಗಿ ವೆಚ್ಚ ಮಾಡಿದ್ರು. ನಗರೋತ್ಥಾನ ಯೋಜನೆಯಲ್ಲಿ ದುಡ್ಡು ಕೊಡಿಸ್ತೀವಿ ಅಂತಾ ಅಧಿಕಾರಿಗಳು ಹೇಳಿದ್ದರಿಂದ, ಅದನ್ನೇ ನಂಬಿಕೊಂಡಿದ್ದ ಗುತ್ತಿಗೆದಾರರು ಇಂದಿರಾ ಕ್ಯಾಂಟೀನ್ ಸುತ್ತಾ ಗ್ರಿಲ್ಸ್​ ಮತ್ತು ಲಾನ್ ಹಾಕಿಸಿದ್ರು. ಆದ್ರೆ ಗುತ್ತಿಗೆದಾರರ ಈ ಬಿಲ್​ ಅನ್ನು ಈಗ ಡಿಸಿಎಂ ಪರಮೇಶ್ವರ್ ರಿಜೆಕ್ಟ್​ ಮಾಡಿ, ಗುತ್ತಿಗೆದಾರರಿಗೆ ಶಾಕ್ ನೀಡಿದ್ದಾರೆ.

ರಿಜೆಕ್ಟ್ ಮಾಡಿದ್ಯಾಕೆ?

ಕಳೆದ ವರ್ಷ ಮಾಡಿದ ಕಾಮಾಗಾರಿಗೆ, ಬಿಬಿಎಂಪಿ ಕಳೆದ ತಿಂಗಳು ಜಾಬ್ ಕೋಡ್ ಕೊಟ್ಟಿದೆ. ಅಧಿಕಾರಿಗಳು ಜಾಬ್ ಕೋಡ್ ಕೊಡದೇ ಗುತ್ತಿಗೆದಾರರಿಂದ ಕೆಲಸ ಮಾಡಿಸಿಕೊಂಡಿದ್ದಾರೆ. ಕೆಲಸಕ್ಕೂ ಮುಂಚಿತವಾಗಿ ನೀಡಬೇಕಿರೋ ಜಾಬ್​​ ಕೋಡ್​ ಅನ್ನು ಕೆಲಸದ ನಂತರ ನೀಡಿದ್ದು ಯಾಕೆ ಎಂಬ ಪ್ರೆಶ್ನೆಗೆ ಯಾರೂ ಉತ್ತರ ಕೊಡುತ್ತಿಲ್ಲ. ಇದೇ ಕಾರಣವನ್ನು ಇಟ್ಟುಕೊಂಡು ಡಿಸಿಎಂ ಪರಮೇಶ್ವರ್ ಕೂಡ ಬಿಲ್ ಅನ್ನು ರಿಜೆಕ್ಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಇಂದಿರಾ ಕ್ಯಾಂಟೀನ್​ಗೆ ಒಂದಿಲ್ಲೊಂದು ಕಂಟಕ ಎದುರಾಗುತ್ತಲೇ ಇದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv