ಕಾಂಗ್ರೆಸ್ ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ಮುಂದುವರಿಕೆ: ಡಿಸಿಎಂ

ಮಂಗಳೂರು: ಕಾಂಗ್ರೆಸ್ ಸರ್ಕಾರವಿದ್ದ ಸಮಯದಲ್ಲಿ ನೀಡಿದ್ದ ಎಲ್ಲಾ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಹೊಸ ಕಾರ್ಯಕ್ರಮವನ್ನು ಸಿಎಂ ಕುಮಾರಸ್ವಾಮಿ ನೀಡಿದ್ದು, ಹಿಂದಿನ‌ ಕಾರ್ಯಕ್ರಮಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಅಂತ ಉಪ ಮುಖ್ಯಮಂತ್ರಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಅನುದಾನ ಕಡಿಮೆ ನೀಡಲಾಗಿದೆಂಬ ಮಾತು ಕೇಳಿಬರುತ್ತಿದೆ. ಆದರೆ ನಾವು ಯಾವುದನ್ನೂ ಕೂಡಾ ನಾವು ಕಡಿಮೆ ಮಾಡಿಲ್ಲ ಎಂದರು. ಇನ್ನು ಬಾಂಗ್ಲಾದೇಶಿ ವಲಸೆಗಾರರ ಅಕ್ರಮ ವಲಸೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅನಧಿಕೃತವಾಗಿ ವಲಸೆ ಬಂದವರ ವೀಸಾ ಕಾರ್ಡ್, ಸಂಬಂಧ ದಾಖಲೆ ಪರಿಶೀಲನೆ ಮಾಡಲಾಗುವುದು. ವೀಸಾ ಎಕ್ಸ್ಪೈರಿ ಆದವರನ್ನು ಹಿಡಿದು ಅವರನ್ನು ಕಳಿಸೋ ವ್ಯವಸ್ಥೆ ನಾವೇ ಮಾಡುತ್ತೇವೆ ಎಂದರು.
ಇದೇ ವೇಳೆ ಹಿಂದೂಗಳ ನಿರ್ಲಕ್ಷ್ಯವೇ ಕಾಂಗ್ರೆಸ್ ಸೋಲಿಗೆ ಕಾರಣವೆಂಬ ಭೋಜೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅದು ಭೋಜೇಗೌಡರ ಅಭಿಪ್ರಾಯ. ಅವರ ಅಭಿಪ್ರಾಯವನ್ನು ನಾವು ಯಾಕೆ ಒಪ್ಪಿಕೊಳ್ಳಬೇಕು. ನಾವು ಯಾಕೆ ಸೋತಿದ್ದೇವೆಂದು ವಿಶ್ಲೇಷಣೆ ಮಾಡಿದ್ದೇವೆ ಎಂದರು. ಸಚಿವರು ದುಂದುವೆಚ್ಚ ಮಾಡುತ್ತಿದ್ದಾರೆ ಎಂಬ ಬಿಜೆಪಿಯವರ ಟೀಕೆಗೆ ಉತ್ತರಿಸಿ, ಮನೆಯವರಿಗೆ ಊಟ ಹಾಕೋದನ್ನು ಯಾರಾದ್ರೂ ಲೆಕ್ಕ ಹಾಕ್ತಾರಾ, ಬಿಜೆಪಿಯವರು ಆಡಳಿತ ಸಮಯದಲ್ಲಿ ಲೆಕ್ಕ ಹಾಕಿದ್ದಾರಾ? ಇದು ಅವರ ಕೀಳು ಮನಸ್ಸನ್ನು ತೋರಿಸುತ್ತದೆ ಎಂದು ಟಾಂಗ್ ನೀಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv